ಕಾಸರಗೋಡು : ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ರಂಗ ಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ ಸಾದರಪಡಿಸಿದ ಕಾರ್ಯಕ್ರಮವು ದಿನಾಂಕ 08-10-2023 ರ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದ ಭೋಜರಾಜ ವಾಮಂಜೂರು “ಕಠಿಣ ಪರಿಶ್ರಮ ಮತ್ತು ನಿಷ್ಠೆಯಿಂದ ಮಾತ್ರ ಪರಿಪೂರ್ಣ ಕಲಾವಿದನಾಗಲು ಸಾಧ್ಯ. ಮಕ್ಕಳಿಗೆ ಎಳವೆಯಲ್ಲೇ ಅವಕಾಶ ಹಾಗೂ ವೇದಿಕೆ ಕಲ್ಪಿಸಿಕೊಟ್ಟಾಗ ಅವರು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಲು ಸಾಧ್ಯ. ಕಲಾದೇಗುಲದಂತಿರುವ ರಂಗಚಿನ್ನಾರಿ ಸಂಸ್ಥೆ ಕಲಾವಿದರನ್ನು ಪೋಷಿಸುತ್ತಿರುವ ಕೇಂದ್ರವಾಗಿದೆ” ಎಂದರು.
ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಎಸ್.ಜಿ.ಪ್ರಸಾದ್ ಮಾತನಾಡಿ “ಪ್ರತಿಯೊಬ್ಬರೂ ಜೀವನದಲ್ಲಿ ಆಗ್ರಹ ಹೊಂದಿರಬೇಕು ಮತ್ತು ಇದನ್ನು ಈಡೇರಿಸಲು ಕಠಿಣ ಪರಿಶ್ರಮಿಗಳಾಗಬೇಕು. ಜೀವನ ಕೇವಲ ಹಣ ಸಂಪಾದನೆಗಾಗಿ ಮೀಸಲಿರಿಸದೆ ಉತ್ತಮ ಜೀವನ ರೂಪಿಸಲು ಮುಡಿಪಾಗಿರಿಸಬೇಕು” ಎಂದರು.
ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಎಸ್.ಸುಜಾತಾ ಅಧ್ಯಕ್ಷತೆ ವಹಿಸಿ, ಸ್ನೇಹರಂಗದ ಮಾರ್ಗದರ್ಶಕಿ ಹಾಗೂ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ಸಹಾಯಕ ಪ್ರಾಧ್ಯಾಪಕಿ ಡಾ.ಆಶಾಲತಾ ಚೇವಾರ್, ‘ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ, ಸ್ನೇಹರಂಗ ಅಧ್ಯಕ್ಷ ಲೋಹಿತ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ಕುಮಾರಿ ಮೇಧಾ ಪ್ರಾರ್ಥಿಸಿದರು, ಬಳಿಕ ಕುಮಾರಿ ಅಶ್ವಿನಿ.ಯಂ ಮತ್ತು ಅಮೃತ.ಯಂ. ಇವರಿಂದ ಭರತನಾಟ್ಯ ಪ್ರಸ್ತುತಗೊಂಡಿತು.
ವೃಂದಗಾನವನ್ನು ಕುಮಾರಿಯರಾದ ಕಾವ್ಯ ಎನ್. ಕೆ, ಅನುಶ್ರೀ.ಯಂ, ಜ್ಯೋತಿಕ.ಎಂ, ಕಾವ್ಯ.ಎಸ್, ನವ್ಯಶ್ರೀ. ಎನ್.ಎಸ್, ನೇಹ.ಪಿ, ಶರಣ್ಯಕೆ.ಜೆ, ಶ್ಲೋಕ.ಬಿ, ಶ್ರೀನಿಧಿ, ಅನನ್ಯ.ಬಿ, ಪರಮೇಶ್ವರಿ.ಟಿ, ಜಯಂತಿ. ಕೆ, ರತ್ನೇಶ್ವರಿ ಕೆ.ಆರ್, ಪ್ರಕೃತಿ.ಕೆ, ಸ್ಮಿತ.ಬಿ, ಸೌಮ್ಯ.ಕೆ, ಊರ್ವಶಿ ಎಸ್.ಕೆ, ಜಯಂತಿ.ಕೆ, ಊರ್ವಶಿ ಎಸ್.ಕೆ, ಹರ್ಷಿತ.ಬಿ, ಭವ್ಯ ಕೆ, ದೀಪಿಕ. ಪಿ.ಆರ್, ರೇಷ್ಮೆ.ಡಿ, ದಿವ್ಯಶ್ರೀ.ಕೆ, ಅಕ್ಷತಾ.ಪಿ, ಅಕ್ಷತಾ.ಡಿ, ಶ್ರೀವಿದ್ಯಾ.ಕೆ, ಹಾಗೂ ಪಲ್ಲವಿ.ಕೆ, ಪ್ರಸ್ತುತಪಡಿಸಿದರು.
ಸಮೂಹನೃತ್ಯದಲ್ಲಿ ಕುಮಾರಿಯರಾದ ಪೂಜಾ.ಕೆ, ಪ್ರಮೀಳಾ.ಕೆ, ಅಮಿತ .ಎಸ್, ರಶ್ಮಿತ.ವಿ, ಶ್ರೇಯ.ಕೆ, ವಿದ್ಯಾಶ್ರೀ .ಜೆ, ಕಾವ್ಯಶ್ರೀ, ಧನ್ಯಶ್ರೀ, ದಿವ್ಯಶ್ರೀ.ಕೆ, ರಶ್ಮಿ.ಟಿ, ಚಿತ್ರ.ಕೆ, ಆಶಾ.ಬಿ, ಕಾವ್ಯ.ಎಸ್, ವರ್ಷಶ್ರೀ.ಆರ್ ಹಾಗೂ ರೇಷ್ಮಾಯಂ ರಂಜಿಸಿದರು.
ಕವಿತಾ ವಾಚನವನ್ನು ದೀಪ್ತಿ.ಯಂ, ಆಶಾಲತಾ.ಬಿ, ಅರ್ಪಿತ ಹಾಗೂ ಜಯಂತಿ.ಕೆ. ಭಾವಗೀತೆಯನ್ನು ಮೇಧ, ಕಾವ್ಯ ಎನ್.ಕೆ ಹಾಗೂ ಪಲ್ಲವಿ.ಕೆ. ಕಂಠಪಾಠವನ್ನು ಜ್ಯೋತಿಕ.ಯಂ. ಜಾನಪದ ನೃತ್ಯವನ್ನು ಗೌತಮಿ. ಕಥಾ ವಾಚನವನ್ನು ರಶ್ಮಿ.ಟಿ ಹಾಗೂ ದಿಲ್ದಾರ್ ಸುಲ್ತಾನ. ಕರಾಟೆಯನ್ನು ಶೈನಿ ದಾಸ್, ಲಘು ಸಂಗೀತವನ್ನು ಶರಣ್ಯ.ಎಸ್ ಹಾಗೂ ಇಶಾ.ಸಿ. ಯಕ್ಷಗಾನ ನೃತ್ಯವನ್ನು ಅಶ್ವಿನಿ.ಪಿ ಹಾಗೂ ಅರ್ಪಿತ. ಪಿ. ಎಸ್ ಪ್ರಸ್ತುತಪಡಿಸಿದರು.
ಬಳಿಕ ನಡೆದ ನಾಟಕದಲ್ಲಿ ದೀಪ್ತಿ.ಯಂ, ಇಶಾ.ಸಿ, ಅರ್ಪಿತ. ಪಿ. ಎಸ್, ಅನನ್ಯ ಬಿ, ನವ್ಯಶ್ರೀ. ಎನ್. ಎಸ್, ಶರಣ್ಯ ಕೆ. ಜೆ, ಕಾವ್ಯ.ಎಸ್, ಪವನ್ ಕುಮಾರ್ ಜಯಪ್ರಕಾಶ್, ಸುಜಿತ್ ಕುಮಾರ್. ಬಿ, ಪ್ರಸಾದ್.ಬಿ ಹಾಗೂ ಅಕ್ಷಯ್.ಎ ಪಾತ್ರವಾಹಿಸಿದರು.