ಮಂಗಳೂರು : ಅಂಚೆ ಇಲಾಖೆಯ ವತಿಯಿಂದ ‘ಢಾಯಿ ಆಖರ್’ ರಾಷ್ಟ್ರೀಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿದ್ದು ಮಂಗಳೂರಿನ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ‘ನವ ಭಾರತ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ’ ವಿಷಯದಲ್ಲಿ ಇಂಗ್ಲಿಷ್, ಹಿಂದಿ, ಕನ್ನಡದಲ್ಲಿ ಪತ್ರ ಬರೆಯಬಹುದು. 18 ವರ್ಷದವರು ಮತ್ತು 18 ವರ್ಷ ಮೇಲ್ಪಟ್ಟವರು ಇನ್ ಲ್ಯಾಂಡ್ ಲೆಟರ್ ಕಾರ್ಡ್‌ನಲ್ಲಿ ಗರಿಷ್ಠ 500 ಪದಗಳು, ಲಕೋಟೆಯಲ್ಲಿ ಗರಿಷ್ಠ 1,000 ಪದಗಳನ್ನು ಬರೆಯಬೇಕು. ಪ್ರತಿ ವಿಭಾಗದಲ್ಲಿ ರಾಜ್ಯಮಟ್ಟ ವಿಜೇತರಿಗೆ ಪ್ರಥಮ ಬಹುಮಾನ ರೂ.25,000/-, ದ್ವಿತೀಯ ಬಹುಮಾನ ರೂ.10,000/-, ತೃತೀಯ ಬಹುಮಾನ ರೂ.5,000/- ಆಗಿರುತ್ತದೆ. ರಾಷ್ಟ್ರೀಯ ಮಟ್ಟದ ವಿಜೇತರಿಗೆ ಪ್ರಥಮ ಬಹುಮಾನ ರೂ.50,000/-, ದ್ವಿತೀಯ ಬಹುಮಾನ ರೂ.25,000/- ಮತ್ತು ತೃತೀಯ ಬಹುಮಾನ ರೂ.10,000/- ಆಗಿರುತ್ತದೆ. ಇನ್ ಲ್ಯಾಂಡ್ ಲೆಟರ್ ಕಾರ್ಡ್ ಮತ್ತು ಲಕೋಟೆಗಳನ್ನು ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು ವಿಭಾಗ ಇವರಿಗೆ ಕಳುಹಿಸಬೇಕು. ಪೋಸ್ಟ್ ಮಾಡಲು ಕೊನೆಯ ದಿನಾಂಕ 31-10-2023 ಆಗಿರುತ್ತದೆ. ಮಾಹಿತಿಗಾಗಿ www.karnatakapost.gov.in ಭೇಟಿ ನೀಡಬಹುದು.