ತೆಕ್ಕಟ್ಟೆ: ಕಳೆದ ಹಲವಾರು ವರ್ಷಗಳಿಂದ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಕೆಲವು ಚಿಣ್ಣರಿಗೆ ಹೂವಿನಕೋಲು ಪ್ರದರ್ಶನಕ್ಕೆ ತಯಾರಿ ನಡೆಸಿ ದಿನಾಂಕ 15-10-2023 ರಿಂದ 24-10-2023ರವರೆಗೆ ನವರಾತ್ರಿ ಸಂದರ್ಭದಲ್ಲಿ ಆಯ್ದ ಮನೆ ಮನೆಗಳಿಗೆ ಪ್ರದರ್ಶನ ನೀಡಲು ತೆರಳುತ್ತಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಘಂಟೆ 8.00ರಿಂದ ಸಂಜೆ ಗಂಟೆ 7.00ರ ತನಕ ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ 20 ಪೌರಾಣಿಕ ಪ್ರಸಂಗದ ತುಣುಕುಗಳನ್ನು ಅಭ್ಯಸಿಸಿ, ಕಲಾಸಕ್ತರ ಮನೆಗಳಿಗೆ ತೆರಳಿ ಪ್ರದರ್ಶಿಸಲಿದ್ದಾರೆ.
‘ಧನ ಕನಕ, ಸಂಪತ್ತು ಸಂಮೃದ್ಧಿಯಾಗಲೆಂದು’ ಹಾರೈಸುವುದಕ್ಕಾಗಿ ಯಶಸ್ವೀ ಕಲಾವೃಂದ ಚಿಣ್ಣರ ಪಡೆ ಪ್ರತೀ ವರ್ಷದಂತೆ ಈ ವರ್ಷವೂ ಅಭಿಯಾನ ರೂಪದ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ. ಈ ಅಳಿವಿನಂಚಿನಲ್ಲಿರುವ ಕಲಾ ಪ್ರಕಾರವನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸತತ 15ವರ್ಷಗಳಿಂದ ಯಶಸ್ವೀ ಕಲಾವೃಂದ ಶ್ರಮಿಸುತ್ತಿದೆ. ಕಲಾಸಕ್ತರು ತಮ್ಮ ಮನೆಗೂ ಆಹ್ವಾನಿಸುವುದಿದ್ದರೆ ಸಂಪರ್ಕ ಸಂಖ್ಯೆ:994594771 ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.