ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಪುತ್ತೂರು ಸಹಯೋಗದೊಂದಿಗೆ ‘ಬಸವಣ್ಣ ಮತ್ತು ಕನಕದಾಸ ಇಹ-ಪರ ಲೋಕದೃಷ್ಟಿ’ ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ದಿನಾಂಕ 08-11-2023ರ ಬುಧವಾರದಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಪುತ್ತೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಒಂದು ಅವಧಿಯನ್ನು ಪ್ರತಿನಿಧಿಗಳ ಪ್ರಬಂಧ ಮಂಡನೆಗೆ ಮೀಸಲಿರಿಸಲಾಗಿದೆ. ಪ್ರಬಂಧ ಮಂಡಿಸಲು ಇಚ್ಛಿಸುವ ಪ್ರತಿನಿಧಿಗಳು *ಕನಕದಾಸರ ಕೀರ್ತನೆಗಳಲ್ಲಿ ಕಾಯಕ ಜಿಜ್ಞಾಸೆ, *ಕುಲದ ಪ್ರಶ್ನೆ, *ಸಂಸಾರ, *ಆತ್ಮವಿಮರ್ಶೆ, *ಕನಕದಾಸರ ಮುಂಡಿಗೆಗಳ ವೈಶಿಷ್ಟ್ಯ, *ಬಸವಣ್ಣನ ವಚನಗಳಲ್ಲಿ ತಾತ್ವಿಕತೆ, *ಸಮಾಜ, *ಸಾಹಿತ್ಯ ಮೌಲ್ಯ, *ಪ್ರಭುತ್ವ ವಿರೋಧಿ ನೆಲೆಗಳು, *ಕುಟುಂಬ ಪರಿಕಲ್ಪನೆ ಇತ್ಯಾದಿ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಲು ಅವಕಾಶವಿದೆ.
ಪ್ರಬಂಧ ಮಂಡಿಸುವವರು ತಮ್ಮ ಪೂರ್ಣ ಪ್ರಬಂಧವನ್ನು ದಿನಾಂಕ 04-11-2023ರ ಮೊದಲು ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ 574199 ಅಥವಾ ಇಮೇಲ್ ID: [email protected] ಇವರಿಗೆ ತಲಪುವಂತೆ ಕಳುಹಿಸಿಕೊಡುವುದು. ಆಯ್ದ ಪ್ರಬಂಧಗಳಿಗೆ ಮಾತ್ರ ಮಂಡನೆಗೆ ಅವಕಾಶ ನೀಡಲಾಗುವುದು. ಆಯ್ಕೆ ಮಾಡಿದ ಮೂರು ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಲಾಗುವುದು. ಭಾಗವಹಿಸುವ ಪ್ರಬಂಧಕಾರರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಆಯ್ದ ಲೇಖನಗಳನ್ನು ISBN ಸಂಖ್ಯೆಯಿರುವ ಕೃತಿಯಲ್ಲಿ ಪ್ರಕಟಿಸಲಾಗುವುದು ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಆನಂದ ಎಂ. ಕಿದೂರು 9591480138 ಇವರನ್ನು ಸಂಪರ್ಕಿಸಬಹುದು.