ಯಲ್ಲಾಪುರ : ಸಂಕಲ್ಪ ಸೇವಾ ಸಂಸ್ಥೆ ಪ್ರಸ್ತುತ ಪಡಿಸುವ ‘ಸಂಕಲ್ಪ ಉತ್ಸವ 37’ವು ದಿನಾಂಕ 01-11-2023ರಿಂದ 05-11-2023ರವರೆಗೆ ಭಕ್ತಿ ಸಂಕಲ್ಪ, ಸಾಂಸ್ಕೃತಿಕ ಸಂಕಲ್ಪ, ಪ್ರಕೃತಿ ಸಂಕಲ್ಪ, ಸಾಮಾಜಿಕ ಸಂಕಲ್ಪದೊಂದಿಗೆ ಯಲ್ಲಾಪುರದ ಗಾಂಧಿ ಕುಟೀರದಲ್ಲಿ ನಡೆಯಲಿದೆ.
ದಿನಾಂಕ 01-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀಮತಿ ಮುಕ್ತಾಶಂಕರ ಮತ್ತು ಶ್ರೀ ಡಿ.ಕೆ. ಗಾಂವ್ಕರ ಇವರಿಂದ ಗಮಕ ವಾಚನ, 6 ಗಂಟೆಗೆ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳಿಂದ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿರುವುದು. ಸಭಾ ಕಾರ್ಯಕ್ರಮದ ನಂತರ ‘ನೃತ್ಯ ರೂಪಕ’ವನ್ನು ವಿದುಷಿ ಸೀಮಾ ಭಾಗ್ವತ್ ತಂಡದವರು ಪ್ರಸ್ತುತ ಪಡಿಸುವರು. ‘ಭೀಷ್ಮ ವಿಜಯ’ ಯಕ್ಷಗಾನ ನಡೆಯಲಿದೆ.
ದಿನಾಂಕ 02-11-2023ರಂದು ಸಂಜೆ ಗಂಟೆ 5ಕ್ಕೆ ಗೌರವಾನ್ವಿತ ಪ್ರತಿಮಾ ಭಟ್ಟ ಕೋಡುರ ಇವರಿಂದ ಕೀರ್ತನೆ, 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ‘ಸುಧನ್ವಾರ್ಜುನ’ ಯಕ್ಷಗಾನ ನಡೆಯಲಿದೆ.
ದಿನಾಂಕ 03-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀ ದತ್ತಾತ್ರೇಯ ವೇಲಣಕರ ತಂಡದವರಿಂದ ಭಕ್ತಿ ಸಂಗೀತ, 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ನಡೆಯಲಿದೆ.
ದಿನಾಂಕ 04-11-2023ರಂದು ಸಂಜೆ ಗಂಟೆ 4ಕ್ಕೆ ಖ್ಯಾತ ನೇತ್ರಜ್ಞರಾದ ಡಾ. ಕೆ. ಶಿವರಾಮ ಇವರಿಂದ ಉಪನ್ಯಾಸ, 5ಕ್ಕೆ ಯಲ್ಲಾಪುರದ ಮಾತೆಯರಿಂದ ಯೋಗ ನೃತ್ಯ, 6.30ಕ್ಕೆ ಸಭಾ ಕಾರ್ಯಕ್ರಮ ಹಾಗೂ 7.30ರಿಂದ ‘ಕೀಚಕ ವಧೆ’ ಯಕ್ಷಗಾನ ನಡೆಯಲಿದೆ.
ದಿನಾಂಕ 05-11-2023ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 5ಕ್ಕೆ ಸ್ವರ್ಣವಲ್ಲಿ ಮಾತೃವೃಂದದವರಿಂದ ‘ಭಜನಾಮೃತ’, 6ಕ್ಕೆ ‘ಆಧ್ಯಾತ್ಮಿಕ ಶಿಕ್ಷಣ’ದ ಬಗ್ಗೆ ಪ್ರವಚನ ಹಾಗೂ 7.00ರಿಂದ ‘ಚೂಡಾಮಣಿ ದರ್ಶನ’ ಯಕ್ಷಗಾನ ನಡೆಯಲಿದೆ.