ಮಂಗಳೂರು : ಅವಿಭಜಿತ ದ.ಕ. ಜಿಲ್ಲೆಯ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ‘ನೃತ್ಯೋತ್ಕರ್ಷ 2023’ ನೃತ್ಯ ಸಮ್ಮೇಳನವನ್ನು ದಿನಾಂಕ 24-12-2023 ಮತ್ತು 25-12-2023ರಂದು ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಾಲಯದ ಭವಾನಿ ಮಂಟಪದಲ್ಲಿ ಹಮ್ಮಿಕೊಂಡಿದ್ದು ಈ ತತ್ಸಂಬಂಧ ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶೇಷವಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು 18 ವರ್ಷ ಪ್ರಾಯದ ಒಳಗಿನವರಿಗೆ ಮತ್ತು 18 ವರ್ಷ ಪ್ರಾಯದ ಮೇಲಿನವರಿಗೆ ಮೊದಲ ವಿಭಾಗದಲ್ಲಿ ವಿಷಯ ‘ವ್ಯಕ್ತಿತ್ವ ವಿಕಸನದಲ್ಲಿ ಶಾಸ್ತ್ರೀಯ ನೃತ್ಯ ಕಲಾಭ್ಯಾಸದ ಪಾತ್ರ’ ಎಂಬ ವಿಷಯದಲ್ಲಿ 1000 ಮಿತಿಗಳ ಪದಗಳೊಂದಿಗೆ, ಎರಡನೇ ವಿಭಾಗದಲ್ಲಿ ‘ಭರತನಾಟ್ಯದಲ್ಲಿ ಭಾರತೀಯ ತತ್ವಶಾಸ್ತ್ರ (ಮಹತ್ವ ಮತ್ತು ಮಿತಿ)’ ವಿಷಯವಾಗಿದ್ದು 1,500 ಪದ ಮಿತಿಗಳ ವಾಕ್ಯಗಳೊಂದಿಗೆ ಬರೆದು ದಿನಾಂಕ 25-11-2023ರ ಒಳಗೆ ಕಳುಹಿಸುವಂತೆ ಕೋರಲಾಗಿದೆ.
ಪ್ರಬಂಧ ಸ್ಪರ್ಧೆಯ ನಿಯಮಾವಳಿಗಳು-
1. ಪ್ರಬಂಧ ಸ್ಪರ್ಧೆಯಲ್ಲಿ ವಿಶ್ವಾದ್ಯಂತ ಯಾರೂ ಭಾಗವಹಿಸಬಹುದು ಮತ್ತು ಯಾವುದೇ ಪ್ರವೇಶ ಶುಲ್ಕ ಇಲ್ಲ.
2. ದಿನಾಂಕ 01-10-2023ಗೆ ಅನ್ವಯ ಆಗುವಂತೆ ವಯಸ್ಸನ್ನು ಪರಿಗಣಿಸಲಾಗುತ್ತದೆ.
3. ಪ್ರಬಂಧದೊಡನೆ ವಯಸ್ಸಿನ ಪ್ರಮಾಣ ಪತ್ರಕ್ಕೆ ಆಧಾರ್ ಅಥವಾ ಪಾಸ್ ಪೋರ್ಟ್ ನ ಪ್ರತಿಯ ಜೆರಾಕ್ಸ್ ನ್ನು ಕಳುಹಿಸಬೇಕು.
4. ನಿಮ್ಮ ವಯಸ್ಸಿನ ಆಧಾರದ ಮೇಲೆ ಯಾವುದಾದರೂ ಒಂದು ಭಾಷೆಯ ಸ್ಪರ್ಧೆಯಲ್ಲಿ ಮಾತ್ರ ಓರ್ವ ಸ್ಪರ್ಧಿಗೆ ಭಾಗವಹಿಸಲು ಅವಕಾಶ.
5. ವಿಷಯವನ್ನು ಟೈಪ್ ಮಾಡಿಸಿ ಅದರ ಪತ್ರಿಯನ್ನು Vid. Smt. Bhramari Shivaprakash, G1 Global Pride apartments, MG Road, Lalbagh Mangaluru 575003 Ph:9448782884 ವಿಳಾಸಕ್ಕೆ ಕಳುಹಿಸಬೇಕು. ಅದರ soft copy ನಿಮ್ಮಲ್ಲಿರಲಿ. ನಮಗೆ ನಿಮ್ಮ ಪ್ರಬಂಧದ ಪ್ರತಿ ತಲುಪಲು ಕೊನೆಯ ದಿನಾಂಕ 25-11-2023. ಅದರ ನಂತರ ಯಾವುದೇ ಪ್ರಬಂಧವನ್ನು ಸ್ವೀಕರಿಸುವುದಿಲ್ಲ. ವಯಸ್ಸಿನ ಪ್ರಮಾಣಪತ್ರದ ದಾಖಲೆಯಲ್ಲಿ ಹೆತ್ತವರ/ಅಭ್ಯರ್ಥಿಯ ದೂರವಾಣಿ ಸಂಖ್ಯೆಯನ್ನು ನಮೂದಿಸಿದಲ್ಲಿ ಪ್ರಬಂಧದ ಪ್ರತಿ ತಲುಪಿದ ಸ್ವೀಕೃತಿ ಸಂದೇಶವನ್ನು ಪದಾಧಿಕಾರಿಗಳು ಕಳುಹಿಸುತ್ತಾರೆ.
6. ಪ್ರಬಂಧದಲ್ಲಿ ಬರಹದ ವಿಧಾನ ವಿಷಯ, ಭಾಷೆ ಮತ್ತು ಒಟ್ಟು ಪರಿಣಾಮಗಳ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
7. ಈ ಸ್ಪರ್ಧೆಯಲ್ಲಿ ಪ್ರತಿ ವಿಭಾಗದ ವಿಜೇತರಿಗೆ
ಪ್ರಥಮ – ಪ್ರಶಸ್ತಿ ಪತ್ರದೊಂದಿಗೆ ರೂ.3,000/-
ದ್ವಿತೀಯ – ಪ್ರಶಸ್ತಿ ಪತ್ರದೊಂದಿಗೆ ರೂ.2,000/- ಮತ್ತು
ತೃತೀಯ- ಪ್ರಶಸ್ತಿ ಪತ್ರದೊಂದಿಗೆ ರೂ 1,000/- ಬಹುಮಾನವಾಗಿ ದಿನಾಂಕ 25-12-2023ರಂದು ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಆಯೋಜನೆಯಲ್ಲಿ ಉಡುಪಿ-ಅಂಬಲಪಾಡಿಯ ಜನಾರ್ದನ ಮಹಾಕಾಳೀ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ನೃತ್ಯೋತ್ಕರ್ಷ – 2023ರ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು.
8. ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧವನ್ನು ನೃತ್ಯೋತ್ಕರ್ಷದ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
9. ತೀರ್ಪುಗಾರರ ತೀರ್ಮಾನವೇ ಅಂತಿಮ.
10. ಈ ಸ್ಪರ್ಧೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸ್ಮರಣ ಸಂಚಿಕೆ ಸಮಿತಿಯ ಸದಸ್ಯರ ಮಕ್ಕಳು(ಜಾತರು) ಭಾಗವಹಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ವಿಳಾಸಕ್ಕಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. ವಿದುಷಿ ಭ್ರಮರಿ ಶಿವಪ್ರಕಾಶ್ 9448782884 ಹಾಗೂ ವಿದುಷಿ ಸುಮಂಗಲಾ ರತ್ನಾಕರ್ 9686801878.