ಮೈಸೂರು : ಆನ್ ಸ್ಟೇಜ್ ಯೂತ್ ಥಿಯೇಟರ್ ಆಯೋಜಿಸುತ್ತಿರುವ 45 ದಿನಗಳ ರಂಗ ತರಬೇತಿ ಕಾರ್ಯಾಗಾರ (ಅಭಿನಯ ಮತ್ತು ನಾಟಕ ತಯಾರಿ) ಕಾರ್ಯಾಗಾರವು ದಿನಾಂಕ 10-11-2023ರಿಂದ ಪ್ರತಿದಿನ ಸಂಜೆ 6:30 ರಿಂದ 9:00ರ ವರೆಗೆ ಮೈಸೂರಿನ ಹೆಬ್ಬಾಳದ ಬಸವನಗುಡಿ ಸರ್ಕಲ್ ಹತ್ತಿರವಿರುವ ಅಣ್ಣಯ್ಯಪ್ಪ ಭೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 8892314554 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ನಿರ್ದೇಶಕ ವಿನೋದ ಸಿ. ಮೈಸೂರು
ಮಂಡ್ಯ ರಮೇಶ್ ಇವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ.
ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಬಿ.ಎಚ್.ಎನ್. ಶಾಲೆಯಲ್ಲಿ ಡ್ರಾಮಾ ಶಿಕ್ಷಕರಾಗಿ ಕೆಲಸ ಮಾಡಿರುವ ಅನುಭವವಿದೆ. ಪ್ರಸ್ತುತ ಖಾಸಗಿ ಕಂಪನಿಯಲ್ಲಿ ‘ಅಕೌಂಟ್’ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ವರ್ಕ್ ಶಾಪ್ ಇನ್ ಮೈಸೂರು ಫಾರ್ ಥೀಯೇಟರಿನಲ್ಲಿ ಸಂಯೋಜಕರಾಗಿದ್ದಾರೆ.
ಎರಡು ವರ್ಷಗಳಿಂದ “ಆನ್ ಸ್ಟೇಜ್ ಯೂಥ್ ಥಿಯೇಟರ್” ತಂಡವನ್ನು ನಡೆಸುತ್ತಿರುವ ಇವರು ಹಲವು ಶಾಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಹಾಗೂ ಪ್ರಸಾಧನ ಮತ್ತು ಬೆಳಕಿನ ಸಂಯೋಜಕರಾಗಿ ಹಲವು ನಾಟಕಗಳಲ್ಲಿ ಕೆಲಸ ಮಾಡಿರುತ್ತಾರೆ.
ಇವರು ನಟನಾಗಿ ಚಾಮ ಚಲುವೆ, ವಾಖಾರಿ ಧೂಸ್, ಚೋರ ಚರಣ ದಾಸ, ವಲಸೆ ಹಕ್ಕಿಯ ಹಾಡು, ಸಾಯೋ ಆಟ, ಸುಭದ್ರಾ ಕಲ್ಯಾಣ, ಕೆಂಪು ಕಣಗಿಲೆ, ಕರ್ಣ ದ್ಯುಮಣಿ, ಬಿಚ್ಚಿದ ಜೋಳಿಗೆ, ಗುರು ಮಾತೆ ಅಕ್ಕನಾಗಲಾಂಬಿಕೆ, ನರ ಬಲಿ, ಊರು ಸುಟ್ಟರೂ ಹನುಮಪ್ಪ ಹೊರಗ, ತಲೆದಂಡ, ಪೊಲೀಸರಿದ್ದಾರೆ ಎಚ್ಚರಿಕೆ, ಹಗ್ಗದ ಕೊನೆ, ಕಾಂಬ್ರೆಡ್ ಕುಂಭಕರಣ ಹಾಗೂ ಹಲವು ಬೀದಿ ನಾಟಕಗಳಲ್ಲಿ ಭಾಗವಹಿಸಿದ್ದಾರೆ.
ಕುಣಿ ಕುಣಿ ನವಿಲೆ, ದೀಪ ಪಿಶಾಚಿ ದೀಪ, ಕುದುರೆ ಮೊಟ್ಟೆ, ಸುಣ್ಣದ ಸುತ್ತು, ಹಗ್ಗದ ಕೊನೆ, ಟೊಳ್ಳು ಗಟ್ಟಿ, ಸಾಧು ಯುವ, ಗಾಂಧಿ ರೂಪಕ, ಮತ್ತು ಗಂಡಸ್ಕತ್ರಿ ಇತ್ಯಾದಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.