ಬಳ್ಳಾರಿ : ಅರಿವು ಟ್ರಸ್ಟ್ ಸಾಹಿತ್ಯ ಬಳಗದಿಂದ “ಸಂಗಂ ಸಾಹಿತ್ಯ ಪುರಸ್ಕಾರ-2023”ಕ್ಕೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು 2021, 2022 ಮತ್ತು 2023ನೇ ಸಾಲಿನಲ್ಲಿ ಪ್ರಥಮ ಮುದ್ರಣ ಕಂಡ ಕನ್ನಡ ಕಥಾ ಸಂಕಲನಗಳನ್ನು ಮಾತ್ರ ಆಯ್ಕೆಗೆ ಕಳುಹಿಸಬಹುದು. ಪ್ರಶಸ್ತಿಯು ರೂ.25,000/- ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಆಸಕ್ತ ಬರಹಗಾರರು, ಪ್ರಕಾಶಕರು ತಮ್ಮ ನೆಚ್ಚಿನ ಕೃತಿಗಳ 4 ಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ.
ನಿಯಮಗಳು :
• ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತಪ್ರತಿಗಳಿಗೆ, ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.
• ಈ ಮೇಲ್ಕಂಡ ವರ್ಷಗಳಲ್ಲಿ ಪ್ರಕಟಗೊಂಡ ಕಥಾ ಸಂಕಲನಗಳು 22-11-2023ರೊಳಗಾಗಿ ನಮಗೆ ತಲುಪುವಂತೆ ಕಳುಹಿಸಬೇಕು.
• ಸಾಹಿತ್ಯ ಪುರಸ್ಕಾರ ಆಯ್ಕೆ ಪ್ರಕ್ರಿಯೆಯ ಕುರಿತು ಸಂಗಂ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
• ಪುಸ್ತಕಗಳನ್ನು ಈ ಕೆಳಕಂಡ ವಿಳಾಸಕ್ಕೆ ರಿಜಿಸ್ಟರ್ ಅಂಚೆಯ ಮೂಲಕ ಕಳುಹಿಸಿಕೊಡತಕ್ಕದ್ದು.
• ನಿಗದಿತ ದಿನಾಂಕದೊಳಗೆ ಕಳುಹಿಸಲು ಕೋರಿದೆ. ಅವಧಿಯ ನಂತರ ಬಂದ ಕೃತಿಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಅರಿವು, 004, ಮರ್ಚೆಡ್ ರೀನೋ, 2ನೇ ಅಡ್ಡರಸ್ತೆ, ಗಾಂಧಿನಗರ, ಬಳ್ಳಾರಿ- 583103. ಹೆಚ್ಚಿನ ಮಾಹಿತಿಗಾಗಿ ವೀರೇಂದ್ರ ರಾವಿಹಾಳ್ – 9449622737 ಮತ್ತು ಡಾ. ಕೆ.ಶಿವಲಿಂಗಪ್ಪ 9980346474 ಇವರನ್ನು ಸಂಪರ್ಕಿಸಬಹುದು.