ಮಂಗಳೂರು : ಸಂತ ಅಲೋಶಿಯಸ್ ಪ್ರೌಢಶಾಲಾ ವತಿಯಿಂದ ಶಾಲಾ ಸಭಾಂಗಣದಲ್ಲಿ ‘ಸಿಂಫನಿ’ – ಶಾಂತಿ ಸೌಹಾರ್ದಕ್ಕಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ದಿನಾಂಕ 31-10-2023ರಂದು ನಡೆಸಿಕೊಟ್ಟರು. ಬೆಳಗ್ಗಿನ ಕಾರ್ಯಕ್ರಮವನ್ನು ಬಹುಮುಖ ಪ್ರತಿಭೆ, ಲೆಕ್ಕಪರಿಶೋಧಕಿ ಪಲ್ಲವಿ ಪ್ರಭು ಎಚ್. ಉದ್ಘಾಟಿಸಿದರು.
ಶಾಲಾ ಮುಖ್ಯೋಪಾಧ್ಯಾಯ ವಂ. ಜೆರಾಲ್ಡ್ ಫುರ್ಟಾಡೊ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ತಾಂಡವವಾಡುತ್ತಿರುವ ಅಶಾಂತಿ, ಅಪನಂಬಿಕೆಗಳ ಬದುಕಿನಲ್ಲಿ ಸೌಹಾರ್ದ ವಾತಾವರಣದ ಅಗತ್ಯವನ್ನು ತಿಳಿಸಿದರು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರ್ತಿ, ಸಂತ ಅಲೋಶಿಯಸ್ ಐಟಿಐ ವಿಭಾಗದ ಉಪನ್ಯಾಸಕಿ ಅಂಕಿತ ಮಸ್ಕರೇನ್ಹಸ್ ಭಾಗವಹಿಸಿದ್ದರು.
‘ಸಿಂಫನಿ’ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಹಾಡುಗಾರಿಕೆಯ ಅನಾವರಣವಾಯಿತು. ಉಪ ಮುಖ್ಯೋಪಾಧ್ಯಾನಿ ಲ್ಯಾನ್ಸಿ ಡಿ’ಸೋಜಾ ಅತಿಥಿಗಳನ್ನು ಸಮ್ಮಾನಿಸಿದರು. ಶಿಕ್ಷಕಿಯರಾದ ಲಿನೆಟ್ ಮಥಾಯಸ್ ಮತ್ತು ಸುನಿತಾ ಪಾಯ್ಸ್ ಪ್ರಸ್ತುತ ಸಮಾಜದ ಸಂಘರ್ಷಮಯ ಚಿತ್ರಣ, ಜಾಗೃತಿಯ ಅಗತ್ಯ ಹಾಗೂ ಸೌಹಾರ್ದವನ್ನು ಪ್ರೇರೇಪಿಸುವ ವಿಚಾರ ಆಧಾರಿತ ವೀಡಿಯೋ ಪ್ರದರ್ಶಿಸಿದರು.
ವಿದ್ಯಾರ್ಥಿಗಳಾದ ಜೋಶುವಾ, ಸಿಮಂತಾ, ಆಫ್ಲಾ, ವಿವಾನ್, ನವೊಮಿ, ಶನನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜೊವಿಟಾ ತರಬೇತಿಗೊಳಿಸಿದರು. ಆದಿಶ್ರೀ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೆನ್ನಿ ವಾಸ್ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕರಾದ ಜಾನ್‌ಚಂದ್ರನ್, ವಿದ್ಯಾರ್ಥಿ ಆರನ್ ಮತ್ತು ವಿಜಯ್ ಮೊರಾಸ್ ಸಹಕರಿಸಿದರು. ಶಿಕ್ಷಕಿಯರಾದ ಸೋನಲ್ ಲೋಬೋ ಅತಿಥಿಗಳನ್ನು ಪರಿಚಯಿಸಿ, ಫೆಲ್ಸಿ ಲೋಬೋ ವಂದಿಸಿ, ಭಾರತಿ ಎನ್.ಕೆ. ಸಹಕರಿಸಿದರು.