ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರುವರೆ ದಶಕಗಳಿಂದ ರಾಜ್ಯ, ಅಂತರರಾಜ್ಯ ಮಟ್ಟದಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ನಿರಂತರ ಕಾರ್ಯ ಚಟುವಟಿಕೆಗಳೊಂದಿಗೆ, ಕ್ರಿಯಾಶೀಲವಾಗಿದ್ದು ಸಾವಿರಾರು ಮಕ್ಕಳಿಗೆ, ಮಹಿಳೆಯರಿಗೆ ಅವಕಾಶ ವಂಚಿತ ಪ್ರತಿಭೆಗಳಿಗೆ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸಿ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಹೊಸ ಹೊಸ ಪರಿಕಲ್ಪನೆಗಳ ಸಮಾರಂಭದ ಕುರಿತು ‘ಕುಂಚ ಕೈಪಿಡಿ’ ಕಿರು ಹೊತ್ತಿಗೆಗೆ ಸಾರ್ವಜನಿಕವಾಗಿ ಲೇಖನಗಳಿಗೆ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೊದಲೇ ಪರೀಕ್ಷೆ ಪೂರ್ವಬಾವಿ ತಯಾರಿ ಉಚಿತ ಕಾರ್ಯಾಗಾರ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿಯನ್ನು ಈಗಾಗಲೇ 36 ಸಾವಿರ ಮಕ್ಕಳಿಗೆ ಅದ್ದೂರಿಯಾಗಿ ಸಮಾರಂಭದಲ್ಲಿ ವಿಜೃಂಭಣೆಯಿಂದ ವಿತರಿಸಿದ ಸವಿನೆನಪಿನ ಪ್ರಶಸ್ತಿ ಪುರಸ್ಕೃತರು ಅವರ ಪೋಷಕರು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಒಂದು ಪುಟಕ್ಕೆ ಮೀರದಂತೆ ಬರೆದು 15-11-2023ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಥವಾ ಇಮೇಲ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 95387322777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು. ಲೇಖನ ಕಳಿಸುವ ವಿಳಾಸ : ಸೃಷ್ಟಿ ಕಂಪ್ಯೂಟರ್, ಶಿವಪ್ಪಯ್ಯ ಸರ್ಕಲ್, ಕೆ.ಟಿ.ಜೆ. ನಗರ, ದಾವಣಗೆರೆ- 577002 ಮತ್ತು ಇಮೇಲ್ [email protected]