ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಆಶ್ರಯದಲ್ಲಿ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ಉದಯರಾಗ – 46 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ದಿನಾಂಕ 05-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾವಿದೆ ಗೀತಾ ಸುರತ್ಕಲ್ ಇವರು ಮಾತನಾಡಿ “ಯುವಜನತೆ ಶಾಸ್ತ್ರೀಯ ಸಂಗೀತ ಕಲೆಗಳತ್ತ ಆಕರ್ಷಿತರಾಗಬೇಕಾದ ಅವಶ್ಯಕತೆಯಿದೆ. ಉದಯರಾಗದಂತಹ ಶಾಸ್ತ್ರೀಯ ಸಂಗೀತ ಕಛೇರಿಗಳಿಂದ ಯುವಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತದೆ” ಎಂದು ನುಡಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ “ಆಂತರಂಗಿಕ ಜ್ಞಾನದ ಬೆಳಕನ್ನು ಹೊರಹೊಮ್ಮಿಸುವ ಶಾಸ್ತ್ರೀಯ ಸಂಗೀತಾಸ್ವಾದನೆ ವಿಶಿಷ್ಟ ಅನುಭವ” ಎಂದರು.
ಉಡುಪಿಯ ಗಾರ್ಗಿ ಶಬರಾಯ ಅವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್‌ನಲ್ಲಿ ಧನ್ಯಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ್ ಸುರತ್ಕಲ್ ಸಹಕರಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ (ರಿ) ಕಾರ್ಯದರ್ಶಿ ಪಿ.ನಿತ್ಯಾನಂದರಾವ್ ಕಾರ್ಯಕ್ರಮ ನಿರೂಪಿಸಿದರು.