ಬೆಳಗಾವಿ : ರಂಗಸಂಪದ (ಲಿ), ಬೆಳಗಾವಿ, ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್, ಧಾರವಾಡ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ‘ಆಧುನಿಕ ಕನ್ನಡ ರಂಗಭೂಮಿ ದಿನ’ ಕಾರ್ಯಕ್ರಮವು ದಿನಾಂಕ 18-11-2023ರಂದು ಸಂಜೆ 5 ಗಂಟೆಗೆ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿಗಳಾದ ಶ್ರೀ ಎಸ್.ಎಮ್, ಕುಲಕರ್ಣಿ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಡಾ. ಸರಜೂ ಕಾಟಕರ ಮತ್ತು ಡಾ. ರಾಮಕೃಷ್ಣ ಮರಾಠೆ ಇವರುಗಳು ಭಾಗವಹಿಸಲಿರುವರು.
ಕಾರ್ಯಕ್ರಮದ ಕೊನೆಯಲ್ಲಿ ರಂಗಸಂಪದ ಬೆಳಗಾವಿ ಪ್ರಸ್ತುತಪಡಿಸುವ ದಿ. ಶಿಂಪಿ ಲಿಂಗಣ್ಣ ರಚನೆ ಮತ್ತು ಡಾ. ಅರವಿಂದ ಕುಲಕರ್ಣಿ ನಿರ್ದೇಶನದಲ್ಲಿ ‘ಅಣ್ಣ-ಬಾಪು’ (ಸ್ವರ್ಗದಲ್ಲಿ ಬಾಪೂಜಿ ಮತ್ತು ಬಸವಣ್ಣ ಇವರ ಸಂಭಾಷಣೆ) ದ್ವಿಪಾತ್ರ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಶ್ರೀ ಅರವಿಂದ ಪಾಟೀಲ ಮತ್ತು ಡಾ. ಅರವಿಂದ ಕುಲಕರ್ಣಿ ಈ ನಾಟಕದಲ್ಲಿ ಅಭಿನಯಿಸುವ ಕಲಾವಿದರು.
ರಂಗಸಂಪದ ಇದರ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ, ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಬಾಬುರಾವ ಸಕ್ಕರಿ ಮತ್ತು ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿಯಾದ ಶ್ರೀ ರಾಮಚಂದ್ರ ಕಟ್ಟಿ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.