ಬೆಂಗಳೂರು : ರಂಗಪಯಣ ಪ್ರಸ್ತುತ ಪಡಿಸುವ ‘ಶಂಕರ್ ನಾಗ್ ನಾಟಕೋತ್ಸವ 2023’ ಕಾರ್ಯಕ್ರಮವು ದಿನಾಂಕ 20-11-2023ರಿಂದ 24-11-2023ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 20-11-2023ರಂದು ಸಂಜೆ ಗಂಟೆ 6ಕ್ಕೆ ಸಾತ್ವಿಕ ರಂಗ ತಂಡದ ‘ರಂಗ ಗೀತೆ’ಯೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಯುತ ಶಶಿಧರ ಅಡಪ ಇವರಿಗೆ ರಂಗ ಮಕ್ಕಳಿಂದ ರಂಗ ಗೌರವ. 7.30ಕ್ಕೆ ರಂಗಪಯಣ ತಂಡದವರಿಂದ ರಾಜ್ ಗುರು ರಚನೆಯ ಸಂಗೀತ ಮತ್ತು ನಿರ್ದೇಶನದ ‘ಸೋಮಾಲಿಯಾ ಕಡಲ್ಗಳ್ಳರು’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 21-11-2023ರಂದು ಸಂಜೆ ಗಂಟೆ 5ಕ್ಕೆ ‘ನನ್ನೊಳಗಿನ ಕಡಲು’ ಕೃತಿ ಲೋಕಾರ್ಪಣೆ ಮತ್ತು ಶ್ರೀಯುತ ಪ್ರವೀಣ್ ಬಿ.ಎಂ. ಇವರಿಂದ ಕಾವ್ಯ ವಾಚನ, 6-05ಕ್ಕೆ ‘ನಮ್ಮ ನಾಟಕ – ನಿಮ್ಮ ಮಾತು’ : ಗುಲಾಬಿ ಗ್ಯಾಂಗ್ 100ರ ಸಂಭ್ರಮ ಪ್ರಯುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ. ಗಂಟೆ 7.15ಕ್ಕೆ ಸಾತ್ವಿಕ ತಂಡ ಅಭಿನಯಿಸುವ ರಾಜ್ ಗುರು ರಚನೆಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ ‘ಬದುಕು ಜಟಕಾ ಬಂಡಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 22-11-2023ರಂದು ಸಂಜೆ ಗಂಟೆ 5ಕ್ಕೆ ಶ್ರೀಯುತ ನಾರಯಣ ರಾಯಚೂರ್ ಇವರಿಂದ ಶ್ರೀಯುತ ಶಂಕರ್ ನಾಗ್ ಅವರ ಜೊತೆಗಿನ ನೆನಪಿನ ಬುತ್ತಿ ಮತ್ತು ಶ್ರೀಯುತ ಬಿ.ಎಂ. ಗಿರಿರಾಜ್ ಇವರಿಂದ ರಂಗಭೂಮಿ ಮತ್ತು ಸಿನಿಮಾ,
ಸಂಜೆ 6ಕ್ಕೆ ರಂಗ ಕನಸು (ರಿ.) ಪ್ರಸ್ತುತ ಪಡಿಸುವ, ಹರ್ಷಕುಮಾರ್ ಕುಗ್ವೆ ರಚನೆಯ, ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ದೇಶನದ ರೋಹಿತ ವೇಮುಲ ಬದುಕನ್ನಾಧರಿಸಿದ ಏಕವ್ಯಕ್ತಿ ರಂಗ ಪ್ರಸ್ತುತಿ ‘ನಕ್ಷತ್ರದ ಧೂಳು’ ನಾಟಕ. 7.30ಕ್ಕೆ ರಾಜ್ ಗುರು ರಚನೆ, ಸಂಗೀತ ಮತ್ತು ನಿರ್ದೇಶನದ ‘ಗುಲಾಬಿ ಗ್ಯಾಂಗು’ 100ನೇ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ರಂಗ ಮಕ್ಕಳಿಂದ ಡಾ. ಬಿ.ವಿ. ರಾಜಾರಾಮ್ ಇವರಿಗೆ ರಂಗ ಗೌರವ.
ದಿನಾಂಕ 23-11-2023ರಂದು ಸಂಜೆ ಗಂಟೆ 5ಕ್ಕೆ ಕಾವ್ಯ ಕಾರಣ 6, ಸಂಜೆ ಗಂಟೆ 6ಕ್ಕೆ ‘ಏಕತಾರಿಯ ನಡಿಗೆ ಸಾಧನಕೇರಿಯ ಕಡೆಗೆ’ (ಸಂತ ಶಿಶುನಾಳ ಶರೀಫಜ್ಜ ಹಾಗೂ ದ.ರಾ. ಬೇಂದ್ರೆ ವಿರಚಿತ ಹಾಡುಗಳ ಹಬ್ಬ). ಗಂಟೆ 7-15ಕ್ಕೆ ನಮ್ಮ ಹಳ್ಳಿ ಥಿಯೇಟರ್ (ರಿ.) ತಂಡದಿಂದ ಪ್ರೊ. ಎಸ್.ಸಿ. ಗೌರಿಶಂಕರ್ ರಂಗರೂಪ ಮತ್ತು ನಿರ್ದೇಶನದ ‘ಮಹಾಬಲಯ್ಯನ ಕೋಟು’ ನಾಟಕ ಪ್ರದರ್ಶನ.
ದಿನಾಂಕ 24-11-2023ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಜೆ ಗಂಟೆ 6ಕ್ಕೆ ರಂಗ ಗೀತೆಗಳು ಮತ್ತು ಗಂಟೆ 7.30ಕ್ಕೆ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗ ತಂಡದಿಂದ ಗಣೇಶ್ ಅಮೀನಗಡ ರಚನೆಯ ರಂಗಾಯಣದ ಮೈಮ್ ರಮೇಶ್ ನಿರ್ದೇಶನದಲ್ಲಿ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.