ಉಡುಪಿ : ನಾಟಕ ಸ್ಪರ್ಧಾ ಸಮಿತಿ ರಂಗಭೂಮಿ (ರಿ.) ಉಡುಪಿ ಆಯೋಜಿಸುವ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್. ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 44ನೇಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ 2023 ಇದರ ಉದ್ಘಾಟನಾ ಸಮಾರಂಭವು ದಿನಾಂಕ 22-11-2023ರ ಬುಧವಾರ ಸಂಜೆ ಘಂಟೆ 6.00ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ರಂಗಭೂಮಿ (ರಿ.) ಉಡುಪಿ ಇದರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್.ಬಲ್ಲಾಳ್ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಆತ್ರಾಡಿಯ ಉದ್ಯಮಿಯಾದ ಶ್ರೀ ಸತ್ಯಾನಂದ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿನಾಂಕ 22-11-2023ರಂದು ಬಳ್ಳಾರಿಯ ಧಾತ್ರಿ ರಂಗ ಸಂಸ್ಥೆ (ರಿ) ಸಿರಿಗೇರಿ ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಸೋರುತಿಹುದು ಸಂಬಂಧ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಮತ್ತು ನಿರ್ದೇಶನ ಮಹಾಂತೇಶ್ ರಾಮದುರ್ಗ ಅವರದ್ದು.
ದಿನಾಂಕ 23-11-2023ರಂದು ಮೈಸೂರಿನ ನಾಲ್ವಡಿ ಸೋಶಿಯಲ್ ಕಲ್ಬರಲ್ & ಎಜ್ಯುಕೇಶನಲ್ ಟ್ರಸ್ಟ್ (ರಿ.) ಪ್ರಸ್ತುತಪಡಿಸುವ ಪೌರಾಣಿಕ ನಾಟಕ ‘ಬೆರಳ್‌ಗೆ ಕೊರಳ್’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಕುವೆಂಪು ಹಾಗೂ ನಿರ್ದೇಶನ ದಿನೇಶ್ ಚಮಾಳಿಗೆ ಅವರದ್ದು.
ದಿನಾಂಕ 24-11-2023ರಂದು ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಹೇ ರಾಮ್’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಮತ್ತು ನಿರ್ದೇಶನ ಸಂತೋಷ್ ನಾಯಕ್ ಪಟ್ಲ ಅವರದ್ದು.
ದಿನಾಂಕ 25-11-2023ರಂದು ಬೆಂಗಳೂರಿನ ಕಲಾ ಮೈತ್ರಿ ವಿಶ್ವವಿದ್ಯಾಲಯ ಪ್ರಸ್ತುತಪಡಿಸುವ ಜಾನಪದ ನಾಟಕ ‘ಮಂಟೇಸ್ವಾಮಿ ಕಥಾ ಪ್ರಸಂಗ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಡಾ. ಹೆಚ್. ಎಸ್. ಶಿವಪ್ರಕಾಶ್ ಹಾಗೂ ನಿರ್ದೇಶನ ಪ್ರೊ ಕೆ. ರಾಮಕೃಷ್ಣಯ್ಯ ಅವರದ್ದು.
ದಿನಾಂಕ 26-11-2023ರಂದು ಬೆಂಗಳೂರಿನ ಅಭಿಜ್ಞಾ ಟ್ರಸ್ಟ್ (ರಿ.) ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಚೋರ ಪುರಾಣ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಸಿದ್ದಲಿಂಗಯ್ಯ ಕಂಬಾಳರು ಹಾಗೂ ನಿರ್ದೇಶನ ಮಂಜುನಾಥ ಎಲ್ ಬಡಿಗೇರ ಅವರದ್ದು.
ದಿನಾಂಕ 27-11-2023ರಂದು ಮಂಡ್ಯದ ಗಮ್ಯ (ರಿ.) ಶ್ರೀರಂಗಪಟ್ಟಣ ಪ್ರಸ್ತುತಪಡಿಸುವ ಐತಿಹಾಸಿಕ ನಾಟಕ ‘ಮಾರನಾಯಕ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಡಾ. ಹೆಚ್. ಎಸ್. ಶಿವಪ್ರಕಾಶ್ ಹಾಗೂ ನಿರ್ದೇಶನ ನಾರಾಯಣ ಸ್ವಾಮಿ ಸಿ. ಅವರದ್ದು.
ದಿನಾಂಕ 28-11-2023ರಂದು ವಿಜಯನಗರದ ಅಕ್ಷರ ಜ್ಞಾನ ಕಲಾ ಸಂಘ (ರಿ.) ಮರಿಯಮ್ಮನ ಹಳ್ಳಿ ಪ್ರಸ್ತುತಪಡಿಸುವ ಜಾನಪದ ನಾಟಕ ‘ಬೆಪ್ಪತಕ್ಕಡಿ ಬೋಳೇಶಂಕರ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಡಾ.ಚಂದ್ರಶೇಖರ ಕಂಬಾರ ಹಾಗೂ ನಿರ್ದೇಶನ ಬಿ.ಎಂ. ಎಸ್. ಪ್ರಭು ಅವರದ್ದು.
ದಿನಾಂಕ 29-11-2023ರಂದು ಬೆಳಗಾವಿಯ ರಂಗಸಂಪದ (ರಿ.) ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಮರಣ ಮೃದಂಗ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ರಾಜೇಂದ್ರ ಕಾರಂತ ಹಾಗೂ ನಿರ್ದೇಶನ ಡಾ. ಅರವಿಂದ ಕುಲಕರ್ಣಿ ಅವರದ್ದು.
ದಿನಾಂಕ 30-11-2023ರಂದು ಧಾರವಾಡದ ಸಮುದಾಯ (ರಿ.) ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ದೇವರ ಹೆಣ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಕುಂ. ವೀರಭದ್ರಪ್ಪ ಹಾಗೂ ನಿರ್ದೇಶನ ವಾಸುದೇವ ಗಂಗೇರ ಅವರದ್ದು.
ದಿನಾಂಕ 01-12-2023ರಂದು ಬೆಂಗಳೂರಿನ ರಂಗರಥ (ರಿ.) ಪ್ರಸ್ತುತಪಡಿಸುವ ಪೌರಾಣಿಕ ನಾಟಕ ‘ಕ್ರೌಂಚಗೀತಾ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಆಸಿಫ್ ಕ್ಷತ್ರಿಯ ಹಾಗೂ ನಿರ್ದೇಶನ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಅವರದ್ದು.
ದಿನಾಂಕ 02-12-2023ರಂದು ಬೆಂಗಳೂರಿನ ರಂಗಪಯಣ (ರಿ.) ಪ್ರಸ್ತುತಪಡಿಸುವ ಸಾಮಾಜಿಕ ನಾಟಕ ‘ಚಂದ್ರಗಿರಿ ತೀರದಲ್ಲಿ’ ಪ್ರದರ್ಶನಗೊಳ್ಳಲಿದ್ದು, ನಾಟಕದ ರಚನೆ ಸಾ.ರಾ. ಅಬೂಬಕ್ಕರ್ ಹಾಗೂ ನಿರ್ದೇಶನ ನಯನಾ ಜೆ ಸೂಡ ಅವರದ್ದು.
ದಿನಾಂಕ 03-12-2023ರಂದು ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ (ರಿ.) ಪ್ರಸ್ತುತಪಡಿಸುವ ಪೌರಾಣಿಕ ನಾಟಕ ‘ದ್ರೋಪತಿ ಹೇಳ್ತವ್ಳೆ’ ಪ್ರದರ್ಶನಗೊಳ್ಳಲಿದ್ದು, ಕುಮಾರ ವ್ಯಾಸ ಭಾರತ ಹಾಗೂ ಜನಪದ ಭಾರತ ಆಧಾರಿತ ಕಥಾ ಹಂದರ ಹೊಂದಿರುವ ಈ ನಾಟಕದ ನಿರ್ದೇಶನ ಗಣೇಶ್ ಮಂದಾರ್ತಿ ಅವರದ್ದು.
ನಾಟಕಗಳು ಪ್ರತಿ ದಿನ ಸಂಜೆ ಘಂಟೆ 6.30 ರಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.