ಮಂಗಳೂರು : ಮಂಗಳೂರಿನ ಸಂಗೀತ ಪರಿಷತ್, ಭಾರತೀಯ ವಿದ್ಯಾಭವನ, ರಾಮಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ‘ಮಂಗಳೂರು ಸಂಗೀತೋತ್ಸವ 2023’ ಕಾರ್ಯಕ್ರಮವನ್ನು ದಿನಾಂಕ 22-11-2023ರಿಂದ 26-11-2023ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 22-11-2023ರಂದು ಸಂಜೆ ಗಂಟೆ 4.45ಕ್ಕೆ ಉದ್ಘಾಟನಾ ಸಮಾರಂಭ ಹಾಗೂ ಬೆಂಗಳೂರಿನ ಶ್ರೀಮತಿ ಗೀತಾ ರಮಾನಂದ್ ಇವರಿಂದ ವೀಣಾವಾದನ, ದಿನಾಂಕ 23-11-2023ರಂದು ಸಂಜೆ ಗಂಟೆ 5ಕ್ಕೆ ವಿಶಾಖಪಟ್ಟಣದ ಶ್ರೀಮತಿ ರಮ್ಯಾ ಕಿರಣ್ಮಯಿ ಚಗಂಟಿಯವರಿಂದ ಹಾಡುಗಾರಿಕೆ, ದಿನಾಂಕ 24-11-2023ರಂದು ಸಂಜೆ ಗಂಟೆ 5ಕ್ಕೆ ಬೆಂಗಳೂರಿನ ಶ್ರೀ ಹೇಮಂತ್ ಮತ್ತು ಶ್ರೀ ಹೇರಂಭ ಇವರಿಂದ ಕೊಳಲುವಾದನ, ದಿನಾಂಕ 25-11-2023ರಂದು ಮಧ್ಯಾಹ್ನ ಗಂಟೆ 3ಕ್ಕೆ ಚೆನ್ನೈಯ ಶ್ರೀ ಅನಿರುದ್ಧ್ ಸುಬ್ರಮಣಿಯನ್ ಇವರಿಂದ ಹಾಡುಗಾರಿಕೆ ಹಾಗೂ ಸಂಜೆ ಗಂಟೆ 5ಕ್ಕೆ ಪುತ್ತೂರಿನ ಶ್ರೀಮತಿ ಸುಚಿತ್ರಾ ಹೊಳ್ಳ ಇವರಿಂದ ಹಾಡುಗಾರಿಕೆ, ದಿನಾಂಕ 26-11-2023ರಂದು ಬೆಳಿಗ್ಗೆ ಗಂಟೆ 10ಕ್ಕೆ ಚೆನ್ನೈಯ ಶ್ರೀ ಪಾಲ್ಘಾಟ್ ಆರ್. ರಾಮ್ ಪ್ರಸಾದ್ ಇವರಿಂದ ಹಾಡುಗಾರಿಕೆ, ಮಧ್ಯಾಹ್ನ 2 ಗಂಟೆಗೆ ಕಿನ್ನಿಗೋಳಿಯ ಕು. ಆಶ್ವೀಜಾ ಉಡುಪ ಇವರಿಂದ ಹಾಡುಗಾರಿಕೆ, ಸಂಜೆ ಗಂಟೆ 4ಕ್ಕೆ ಸಮಾರೋಪ ಹಾಗೂ ಸಂಜೆ ಗಂಟೆ 5ಕ್ಕೆ ಚೆನ್ನೈಯ ಪದ್ಮ ಶ್ರೀ ಎ. ಕನ್ಯಾಕುಮಾರಿ ಇವರಿಂದ ಪಿಟೀಲು ವಾದನ ಕಾರ್ಯಕ್ರಮಗಳು ನಡೆಯಲಿದೆ.