ಉಪ್ಪೂರು : ಮಯ್ಯ ಯಕ್ಷ ಬಳಗ ಹಾಲಾಡಿ ಕುಂದಾಪುರ, ಕರ್ನಾಟಕ ಯಕ್ಷಧಾಮ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇದರ ಸಂಯೋಜನೆಯಲ್ಲಿ ಪ್ರಾಚಾರ್ಯ ಮಾರ್ವಿ ನಾರಣಪ್ಪ ಉಪ್ಪೂರರ ಸಂಸ್ಕರಣೆ, ಯಜಮಾನ ‘ಪಿ ಶ್ರೀಧರ ಹಂದೆಯವರ ನೆನಪು’ ಶಿಷ್ಯ ಭಾಗವತ ‘ಜಿ. ರಾಘವೇಂದ್ರ ಮಯ್ಯರ ಕನಸು’ ಯಕ್ಷಗಾನ ಸಭಾವಂದನ, ಸಂಸ್ಮರಣೆ ಸಮ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 02-12-2023 ರಂದು ಮದ್ಯಾಹ್ನ ಘಂಟೆ 3.00 ರಿಂದ. ಮುದೂರಿ (ಮಯ್ಯರ ಮನೆ) ಶಾಲೆಯ ನಾರಣಪ್ಪ ಉಪ್ಪರರ ವೇದಿಕೆಯಲ್ಲಿ ನಡೆಯಲಿರುವುದು.
ಕಾರ್ಯಕ್ರಮದಲ್ಲಿ ಗೌರವ ಅಭ್ಯಾಗತರಾಗಿ ಶ್ರೀ ಕಿರಣ್ ಕುಮಾರ್ ಕೊಡ್ಲಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ಬಾಲಕೃಷ್ಣ ಶೆಟ್ಟಿ ಹಿಲಿಯಾಣ, ಶ್ರೀ ಕೃಷ್ಣಮೂರ್ತಿ ಉಪ್ಪೂರ, ಶ್ರೀ ಪಿ. ವೆಂಕಟೇಶ್ ಹಂದೆ, ಶ್ರೀ ಅಶೋಕ ಶೆಟ್ಟಿ ಚೋರಾಡಿ, ಶ್ರೀ ಸಂಜೀವ ನಾಯ್ಕ, ಶ್ರೀ ಆನಂದ ಕುಂದರ್, ಡಾ. ನಾಗೇಶ್ ಕುಂದಾಪುರ, ಶ್ರೀ ಜನಾರ್ದನ ಹಂದೆ, ಶ್ರೀ ಪ್ರಕಾಶ ಶೆಟ್ಟಿ ಗೈನಾಡಿ, ಶ್ರೀ ರಾಜಶೇಖರ ಹೆಬ್ಬಾರ್, ಶ್ರೀ ಹೆಚ್. ಸುಜಯೀಂದ್ರ ಹಂದೆ, ಶ್ರೀ ನಾಗರಾಜ್ ಗೋಳಿ ಹಾಗೂ ಶ್ರೀ ಗಣೇಶ್ ಎಂ. ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಗೋಳಿ ಕಾಸಾಡಿಇವರಿಗೆ, ಭಾಗವತ ಮಾರ್ವಿ ನಾರಣಪ್ಪ ಉಪ್ಪೂರರ ಪ್ರಶಸ್ತಿ, ಶ್ರೀ ಮೊಳಹಳ್ಳಿ ಕೃಷ್ಣ ಇವರಿಗೆ ಯಜಮಾನ ಶ್ರೀಧರ ಹಂದೆ ಯವರ ಪ್ರಶಸ್ತಿ ಹಾಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಆರ್ಗೋಡು ಮೋಹನದಾಸ ಶೆಣೈ ಇವರಿಗೆ ಮಯ್ಯ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಭಾಕರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಶ್ರೀ ಕೃಷ್ಣ ವಿಲಾಸ” ಯಕ್ಷಗಾನ ಬಯಲಾಟ ನಡೆಯಲಿರುವುದು. ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀಗಳಾದ ಜಿ. ರಾಘವೇಂದ್ರ ಮಯ್ಯ ಹಾಲಾಡಿ ಹಾಗೂ ಲಂಬೋದರ ಹೆಗಡೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಹಾಗೂ ಚಂಡೆಯಲ್ಲಿ ಸುಜನ್ ಹಾಲಾಡಿ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಅಜ್ಜಿಯಾಗಿ ರಮೇಶ್ ಭಂಡಾರಿ ಮೂರೂರು, ಚಂದಗೋಪನಾಗಿ ಕೋಡಿ ವಿಶ್ವನಾಥ ಗಾಣಿಗ, ಶ್ರೀ ಕೃಷ್ಣನಾಗಿ ಚಂದ್ರಹಾಸ ಗೌಡ ಹೊಸಪಟ್ಟ, ಚಂದ್ರಾವಳಿಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ, ರಾಧೆಯಾಗಿ ಮಾಧವ ನಾಗೂರು ಹಾಗೂ ಲಂಡಿಪುಸ್ಕಿಯಾಗಿ ನಾರಾಯಣ ಉಳ್ಳೂರ ಭಾಗವಹಿಸಲಿದ್ದಾರೆ.