ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಎರಡನೇ ಶನಿವಾರ ಆಯೋಜಿಸುವ ರಂಗ ಮಾಲೆ – ನಾಟಕ ಸರಣಿ ಕಾರ್ಯಕ್ರಮವು ದಿನಾಂಕ 10-11-2023 ಮತ್ತು 11-11-2023 ರಂದು ನಡೆಯಿತು.
ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭಕ್ಕಾಗಿ ಈ ಬಾರಿ ನಾಡಿನ ಖ್ಯಾತ ರೆಪರ್ಟಿಗಳಲ್ಲಿ ಒಂದಾದ ನಿನಾಸಂ ಹೆಗ್ಗೂeಡು ತಿರುಗಾಟ – 2023-24. ರ ಎರಡು ನಾಟಕಗಳನ್ನು ವೇದಿಕೆಯ ಅಧ್ಯಕ್ಷ ಕೆ. ವಿ ವೆಂಕಟರಮಣಪ್ಪ. ಪಾಪಣ್ಣ ಕಾಟಂ ನಲ್ಲೂರು ಉದ್ಘಾಟಿಸಿದರು. ಮೊದಲ ದಿನ ಜ್ಞಾನಪೀಠ ಪ್ರಶಸ್ತಿ ವಿಜೇತ. ಡಾ. ಚಂದ್ರಶೇಖರ ಕಂಬಾರರ ‘ಹುಲಿಯ ನೆರಳು’ ನಾಟಕವನ್ನು ಕೆ.ಜಿ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು. ರಂಗ ಮಾಲೆ – 76 ರಲ್ಲಿ. ಎರಡನೇ ದಿನ ದಕ್ಷಿಣ ಆಫ್ರಿಕ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆ. ಲೂಯಿ ನಕೋಶಿ ರಚಿಸಿ. ನಟರಾಜ ಹೊನ್ನವಳ್ಳಿ ಅನುವಾದಿಸಿದ ನಾಟಕ ‘ಆ ಲಯ ಈ ಲಯ’ ವನ್ನು ಶ್ವೇತಾರಾಣಿ ಹೆಚ್. ಕೆ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು. ಎರಡೂ ನಾಟಕಗಳು ನೆರದ ಪ್ರೇಕ್ಷಕರನ್ನ ಮಂತ್ರಮುಗ್ಧರನ್ನಾಗಿಸಿತು. ಎಲ್ಲಾ ಕಲಾವಿದರನ್ನು ಹಾಗೂ ದಾಸೋಹಕ್ಕೆ ಊಟದ ತಟ್ಟೆಗಳನ್ನು ದಾನ ನೀಡಿದ ಹೊಸಕೋಟೆಯ ಕಾವೇರಿ ನಗರದ ಸೋಮಶೇಖರ್. ಅಶ್ವಥ್. ಮುನಿಯಪ್ಪ ರವರನ್ನು ಪಾಪಣ್ಣ ಕಾಟಂನಲ್ಲೂರು ಸನ್ಮಾಸಿ ಗೌರವಿಸಿದರು. ವೇದಿಕೆ ಪಧಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ ನನಸುಮನೆ, ಎಂ. ಸುರೇಶ್, ಮಮತ ಮತ್ತು ಮುನಿರಾಜು ಮಹೇಶ್ ಹಾಜರಿದ್ದರು.