ಮಧೂರು : ಮಕ್ಕಳ ದಿನಾಚರಣೆಯ ಪ್ರಯುಕ್ತ ನಾಟ್ಯರಂಗ ಪುತ್ತೂರು ಹಾಗೂ ನಾಟ್ಯ ಮಂಟಪ ಮಧೂರು ಇವರ ವತಿಯಿಂದ ಮಧೂರು ಪಂಚಾಯತ್ ಬಡ್ಸ್ ಶಾಲೆಯ ಮಕ್ಕಳಿಗಾಗಿ ‘ನಾಟ್ಯ ಪ್ರವೇಶಿಕೇ’ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಧೂರು ಪಂಚಾಯತ್ ಸ್ಥಾಯಿ ಸಮಿತಿ ಛೇರ್ಮನ್ ರಾಧಾಕೃಷ್ಣ ಸುರ್ಲು ಕಾರ್ಯಕ್ರಮವನ್ನು ದಿನಾಂಕ 14-11-2023ರಂದು ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಾಯ್ತ್ ಅಧ್ಯಕ್ಷರಾದ ಕೆ. ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಶೋದಾ ಸುಂದರ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ವಾರ್ಡ್ ಸದಸ್ಯೆ ಜನನಿ ಮುರಳಿ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೋಟೆಕಣಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಸ್ಮಿಜ ವಿನೋದ್ ಉಪಸ್ಥಿತರಿದ್ದರು. ಬಡ್ಸ್ ಶಾಲಾ ಅಧ್ಯಾಪಕಿ ಕವಿತ ಸ್ವಾಗತಿಸಿದರು. ತದನಂತರ ನಾಟ್ಯರಂಗ ಪುತ್ತೂರು ಇದರ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಮಣ್ಯ ಅವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ನೃತ್ಯದ ವಿವಿಧ ಹಸ್ತ, ಚಲನೆಗಳನ್ನು ಬಡ್ಸ್ ಶಾಲಾ ಮಕ್ಕಳಿಗೆ ಪರಿಚಯಿಸಲಾಯಿತು. ನಾಟ್ಯಮಂಟಪ ಮಧೂರು ಇದರ ನಿರ್ದೇಶಕಿ ಸೌಮ್ಯ ಶ್ರೀಕಾಂತ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜೊತೆಗೆ ಮುಂದಿನ ದಿನಗಳಲ್ಲಿ ವಾರಕ್ಕೆ ಒಂದು ತಾಸು ಅಲ್ಲಿನ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ಕೈಗೊಳ್ಳಲಿದ್ದಾರೆ.