ಸುಳ್ಯ : ಕ.ಸಾ.ಪ. ಸುಳ್ಯ ತಾಲೂಕು ಘಟಕದ ವತಿಯಿಂದ ಸುವಿಚಾರ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ಸುಳ್ಯದ ಕನ್ನಡ ಭವನದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಕವಿಗೋಷ್ಠಿ ಹಾಗೂ ಜ್ಞಾನಪೀಠ ಪುರಸ್ಕೃತ ವಿ.ಕೃ. ಗೋಕಾಕ್ ನೆನಪು ಕಾರ್ಯಕ್ರಮವನ್ನು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಇವರು ದಿನಾಂಕ 05-11-2023ರಂದು ಉದ್ಘಾಟಿಸಿದರು.
ವಿ.ಕೃ. ಗೋಕಾಕ್ ಕುರಿತು ಕ.ಸಾ.ಪ.ದ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ಉಪನ್ಯಾಸ ಗೈದರು. ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕವಿ, ಸಾಹಿತಿ ಶ್ರೀಮತಿ ಸಂಗೀತ ರವಿರಾಜ್ “ನಿಮ್ಮ ಬರಹಗಳನ್ನು ತಿಳಿದವರಿಗೆ ತೋರಿಸಿ, ತಿದ್ದಿ ಇನ್ನಷ್ಟು ಉತ್ತಮಗೊಳಿಸಬೇಕು. ನೇರ ಹೇಳಿದರೆ ಗದ್ಯವಾಗುತ್ತದೆ. ರೂಪಕಗಳ ಮೂಲಕ ಅಮೂರ್ತವಾಗಿ ಹೇಳುವ ಕಲೆಯೇ ಕವಿತೆ, ಅದು ಎಲ್ಲರಿಗೂ ಅರ್ಥವಾಗಬೇಕೆಂದಿಲ್ಲ. ಅದನ್ನು ಕೇಳಿ ಆಸ್ವಾದಿಸುವುದಷ್ಟೇ ನಮ್ಮ ಕೆಲಸ. ಬರೆಯುವರು ಗುಣಮಟ್ಟ ಕಾಯ್ದುಕೊಳ್ಳಬೇಕು. ನಿರಂತರ ಅಧ್ಯಯನದಿಂದ ಮಾತ್ರ ಇದು ಸಾಧ್ಯ” ಎಂದು ಹೇಳಿದರು.
ಕವಿಗಳಾದ ವಿಮಲಾರುಣ ಪಡ್ಡಂಬೈಲು, ಸಂಧ್ಯಾ ಕುಮಾರ್ ಉಬರಡ್ಕ, ವಿದ್ಯಾಶಂಕರಿ ಅಜ್ಜಾವರ, ಹೇಮಲತಾ ಗಣೇಶ್ ಕಚೆಗದ್ದೆ, ಪ್ರೇಮಾ ಮೂಲ್ಕಿ, ಅಂಕಿತಾ ಆಚಾರ್ಯ ಕಡ್ಲಾರು, ಮಮತಾ ರವೀಶ್ ಪಡ್ಡಂಬೈಲು, ಅಕ್ಷತಾ ನಾಗನಕಜೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಕುಸುಮಾಕರ ಅಂಬೆಕಲ್ಲು ಚೆಂಬು, ತಿತೀಕ್ಷಾ ಎಂ.ಜೆ. ಮರಕತ, ಸಮ್ಯಕ್ತ್ ಜೈನ್ ಕಡಬ, ಅಶ್ವಿನಿ ಕೋಡಿಬೈಲು, ಪದ್ಮನಾಭ ಕೊಯನಾಡು, ಪೂರ್ಣಿಮಾ ತೋಟಪ್ಪಾಡಿ, ರಮ್ಯಾ ಅಡ್ಕಾರ್, ಉದಯ ಭಾಸ್ಕರ್ ಸುಳ್ಯ, ಪರಮೇಶ್ವರಿ ಪ್ರಸಾದ್, ಸ್ಮಿತಾ ಕೆ., ಅನುರಾಧ ಜನಾರ್ದನ್, ಮಮತಾ ರವೀಶ್ ಪಡ್ಡಂಬೈಲು ಕವನ ವಾಚಿಸಿದರು.
ವೇದಿಕೆಯಲ್ಲಿ ಸುವಿಚಾರ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಗಿರಿಜಾ ಎಂ.ವಿ., ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕ ರಮೇಶ್ ನೀರಬಿದಿರೆ ಸ್ವಾಗತಿ, ಕಸಾಪ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಂಕೀರ್ಣ ಚೊಕ್ಕಾಡಿ ವಂದಿಸಿ, ಕಸಾಪ ಕಾ.ಸ.ಸದಸ್ಯೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.