ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು ದಿನಾಂಕ 19-11-2023ರಿಂದ 25-11-2023ರವರೆಗೆ ‘ವಿಶ್ವ ಪರಂಪರೆಯ ಸಪ್ತಾಹ’ವನ್ನು ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ (ಕೊಡಿಯಾಲ್ ಗುತ್ತು ಪಶ್ಚಿಮ)ದಲ್ಲಿ ಆಚರಿಸಲಿದೆ.
ದಿನಾಂಕ 19-11-2023ರಂದು ಭಾನುವಾರ ಬೆಳಿಗ್ಗೆ ಗಂಟೆ 10-30ಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶ್ರೀ ಬಿ.ಟಿ. ಓಬಲೇಶಪ್ಪ ಅವರಿಂದ ‘ಡೆಮಾಲಿಶನ್ ತೀರ್ಪಿನಿಂದ ಬದುಕುಳಿದ ಉಡುಪಿ ಉಪ ಕಾರಾಗೃಹ’ ಎಂಬ ಪ್ರದರ್ಶನದ ಉದ್ಘಾಟನೆಯೊಂದಿಗೆ ಒಂದು ವಾರದ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಜನಾರ್ದನ ಹಾವಂಜೆಯವರಿಂದ ಪ್ರಾಸ್ತಾವಿಕ ಭಾಷಣ ನಡೆಯಲಿದ್ದು, ಉಡುಪಿ ಉಪ ಕಾರಾಗೃಹದ ಕುರಿತು ಶರ್ವಾಣಿ ಭಟ್ ನಿರೂಪಣೆ ಮಾಡಲಿದ್ದಾರೆ. ಪ್ರದರ್ಶನವು ದಿನಾಂಕ 19-11-2023ರಿಂದ 25-11-2023ರವರೆಗೆ 11-00ರಿಂದ ಮಧ್ಯಾಹ್ನ 1-00ರವರೆಗೆ ಮತ್ತು ಸಂಜೆ 4-00ರಿಂದ 7-00ರವರೆಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ ಗಂಟೆ 5-30ಕ್ಕೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 20-11-2023ರಂದು ವಾಸ್ತುಶಿಲ್ಪಿ ನಿರೇನ್ ಜೈನ್ ಅವರಿಂದ ‘ಮಂಗಳೂರಿನ ಬೀದಿ ಮತ್ತು ಸ್ಥಳದ ಹೆಸರುಗಳನ್ನು ಕಾಲಾಂತರವಾಗಿ ಅನ್ವೇಷಿಸುವುದು’, ದಿನಾಂಕ 21-11-2023ರಂದು ವಾಸ್ತುಶಿಲ್ಪಿ ಕ್ಯಾರೊಲಿನ್ ಡಿಸೋಜಾ ಅವರಿಂದ ‘ಮಂಗಳೂರಿನ ಹಳೆ ಬಂದರಿನ ವೈವಿಧ್ಯಮಯ ಪದರುಗಳಿಂದ ತುಂಬಿರುವ ನಗರೀಕರಣ’, ದಿನಾಂಕ 22-11-2023ರಂದು ವಾಸ್ತುಶಿಲ್ಪಿಗಳಾದ ಸಿಂಧುಶ್ರೀ ಮತ್ತು ಸಿತಾರಾ ಅವರಿಂದ ‘ಮಂಗಳೂರು ನಗರದಲ್ಲಿ ಕಟ್ಟೆಗಳು’, ದಿನಾಂಕ 23-11-2023ರಂದು ವಾಸ್ತು ವಿದ್ವಾನ್ ಸುಬ್ರಹ್ಮಣ್ಯ ಭಟ್ ಅವರಿಂದ ‘ತುಳುನಾಡಿನ ಸಾಂಪ್ರದಾಯಿಕ ದೇವಾಲಯಗಳು ಮತ್ತು ಮನೆಗಳು’, ದಿನಾಂಕ 24-11-2023ರಂದು ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಮತ್ತು ವಾಸ್ತುಶಿಲ್ಪಿ ಸುಭಾಸ್ ಬಸು ಅವರಿಂದ ‘ರಾಯಪುರದಲ್ಲಿ ಜಮೀನ್ದಾರ್ ಬಾರಿ’ ಮತ್ತು ದಿನಾಂಕ 25-11-2023ರಂದು ಲೇಖಕ ವಿಲಿಯಂ ಪಾಯ್ಸ್ ಅವರಿಂದ ‘ಸಾಮೂಹಿಕ ಸ್ಮರಣೆಯಾಗಿ ಪರಂಪರೆ’ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಸುಭಾಸ್ ಚಂದ್ರ ಬಸು (ಸಂಚಾಲಕ, ಇಂಟಾಕ್) : 8762368048 ಇಮೇಲ್: [email protected]