ಪುತ್ತೂರು : ಸಂಸಾರ ಜೋಡುಮಾರ್ಗ ಇದರ ಆಶ್ರಯದಲ್ಲಿ ರೋಟರಿ ಪುತ್ತೂರು ಎಲೈಟ್ ಸಹಭಾಗಿತ್ವದಲ್ಲಿ ನಿರತ ನಿರಂತ ಬಹುವಚನಂ ಆಯೋಜನೆಯ ಮೂರು ದಿನಗಳ ‘ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ’ವು ದಿನಾಂಕ 22-11-2023ರಿಂದ 24-11-2023ರವರೆಗೆ ಪುತ್ತೂರಿನ ಎಡ್ವರ್ಡ್ ಹಾಲ್ ಸುದಾನ ಆವರಣದಲ್ಲಿ ನಡೆಯಲಿದೆ.
ದಿನಾಂಕ 22-11-2023ರಂದು ಸಂಜೆ ಗಂಟೆ 6.30ರಿಂದ ಮಾಣೆ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವ ನಾಟಕ ‘ಆರೋಗ್ಯ ಸಿರಿ’. ಈ ನಾಟಕದ ರಚನೆ ಮತ್ತು ನಿರ್ದೇಶನ ಮೌನೇಶ ವಿಶ್ವಕರ್ಮ ಮಾಡಿದ್ದು, ಪರಿಕಲ್ಪನೆ ರವೀಂದ್ರ ದರ್ಬೆ ಅವರದ್ದು, ವಿಜಯಲಕ್ಷ್ಮೀ ವಿ. ಶೆಟ್ಟಿ ಮಾರ್ಗದರ್ಶನದಲ್ಲಿ ಜಯಶ್ರೀ ಆಚಾರ್ಯ ಮತ್ತು ಸಂಧ್ಯಾ ಸಹಕಾರ ನೀಡಲಿದ್ದಾರೆ. ಸಂಜೆ 7-15ಕ್ಕೆ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವ ನಾಟಕ “ರೋಗಗಳ ಮಾಯದಾಟ’. ಈ ನಾಟಕದ ರಚನೆ ಮತ್ತು ನಿರ್ದೇಶನ ಮೌನೇಶ ವಿಶ್ವಕರ್ಮ ಮಾಡಿದ್ದು, ಪರಿಕಲ್ಪನೆ ಪೂಜಾ ಎಂ.ವಿ. ಅವರದ್ದು, ಶೋಭಾ ನಾಗರಾಜ್ ಮಾರ್ಗದರ್ಶನ ನೀಡಲಿದ್ದಾರೆ.
ದಿನಾಂಕ 23-11-2023ರಂದು ಸಂಜೆ ಗಂಟೆ 6.30ರಿಂದ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗ ಪ್ರಯೋಗಿಸುವ ನಾಟಕ ‘ಕಾರಂತಜ್ಜನಿಗೊಂದು ಪತ್ರ’. ಈ ನಾಟಕದ ಮೂಲಕತೆ ಸಚ್ಚಿದಾನಂದ ಹೆಗಡೆಯವರದ್ದು, ರಂಗಪಠ್ಯ ಮತ್ತು ನಿರ್ದೇಶನ ಐಕೆ ಬೊಳುವಾರು ನಿರ್ವಹಿಸಲಿದ್ದು, ಸುನೀತಾ ಎಂ. ಮತ್ತು ರೂಪಕಲಾ ರೈ ಸಹಕರಿಸಲಿದ್ದಾರೆ. ಗಂಟೆ 7.30ಕ್ಕೆ ರೋಟರಿ ಪುತ್ತೂರು ಎಲೈಟ್ ಇದರ ಸದಸ್ಯರು ಅಭಿನಯಿಸುವ ನಾಟಕ ‘ಅಯ್ಯಯ್ಯೋ ಮಾನವ .. !’. ಈ ನಾಟಕದ ರಚನೆ ಮತ್ತು ನಿರ್ದೇಶನ ಮೌನೇಶ ವಿಶ್ವಕರ್ಮ ಮಾಡಿದ್ದು, ಪರಿಕಲ್ಪನೆ ಬಾಲು ನಾಯ್ಕ ಅವರದ್ದು, ಸಂಗೀತ ಶಿವಗಿರಿ ಕಲ್ಲಡ್ಕ ಮತ್ತು ರಾಕೇಶ್ ಆಚಾರ್ಯ ನಿರ್ವಹಿಸಲಿದ್ದು, ರೊ. ಅಬ್ದುಲ್ ರಝಾಕ್ ಕಬಕಕಾರ್ಸ್, ರೊ. ಆಸ್ಕರ್ ಆನಂದ್ ಮತ್ತು ರೊ. ರಾಮ ಕೆ. ನಿರ್ವಹಣೆ ಮಾಡಲಿದ್ದಾರೆ.
ದಿನಾಂಕ 24-11-2023ರಂದು ಸಂಜೆ ಗಂಟೆ 6.30ರಿಂದ ಸಾಗರದ ಕಿನ್ನರ ಮೇಳ ತುಮರಿ ಇದರ ಕಲಾವಿದರು ಅಭಿನಯಿಸುವ ನಾಟಕ ‘ಆನ್ಯಾಳ ಡೈರಿ’. ಈ ನಾಟಕದ ಆಧಾರ ಆನ್ ಫ್ರಾಂಕ್ – ಡೈರಿ ಆಫ್ ಎ ಯಂಗ್ ಗರ್ಲ್, ಎಚ್.ಕೆ. ರಾಮಚಂದ್ರ ಮೂರ್ತಿ ನಾಟಕ ರೂಪಾಂತರ ಮಾಡಿದ್ದು, ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ.