ಕಾಸರಗೋಡಿನ ಮಧೂರಿನಲ್ಲಿ ಪುಂಡರೀಕಾಕ್ಷ ಹೆಬ್ಬಾರ್ ಹಾಗೂ ಮಹಾಲಕ್ಷ್ಮಿ ಅಮ್ಮ ದಂಪತಿಗಳಿಗೆ ದಿನಾಂಕ 23-05-1947ರಲ್ಲಿ ಜನಿಸಿದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ ಮತ್ತು ಹಿಂದಿ ವಿಶಾರದಾ ವಿದ್ಯಾಭ್ಯಾಸ ಪಡೆದವರು. ಮಧೂರು ಪದ್ಮನಾಭ ಸರಳಾಯರಲ್ಲಿ ಏಳುವರ್ಷ ಶಾಸ್ತ್ರೀಯ ಸಂಗೀತ ತರಬೇತಿ ಪಡೆದರು. 1972ರಿಂದೀಚೆಗೆ 40ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ರಂಗಾನುಭವ ಹೊಂದಿದ್ದಾರೆ. ಹಾಗೂ ಪ್ರಥಮ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇವರ ಸಾಧನೆಗೆ ಕರ್ನಾಟಕ ಸರಕಾರದ ಸಾಧಕ ಹಿರಿಯ ನಾಗರಿಕ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿವಿ ಯಕ್ಷ ಮಂಗಳಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಸಾಧಕ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕಿ, ವಾಚಕಿಯರ ಸಂಘ ಪ್ರಶಸ್ತಿ , ಅಗರಿ ಪ್ರಶಸ್ತಿ, ಉಡುಪಿಯ ಪೇಜಾವರ ಮಠದ ಪ್ರಶಸ್ತಿ ಹಾಗೂ ಇತರ ನೂರಾರು ಸನ್ಮಾನ ಹಾಗೂ ಗೌರವಗಳು ಸಂದಿವೆ.
ಪತಿ ಕೆ.ಹರಿನಾರಾಯಣ ಬೈಪಾಡಿತ್ತಾಯರ ಜೊತೆಗೂಡಿ ಎರಡು ದಶಕಗಳಿಂದ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಬಜ್ಪೆಯ ತಲಕಳ ದೇವಸ್ಥಾನದ ಬಳಿ ತಮ್ಮ ಮನೆ ‘ಕಲಾನುಗ್ರಹ’ದಲ್ಲಿ ಹಲವಾರು ಮಕ್ಕಳಿಗೆ ಯಕ್ಷಗಾನವನ್ನು ಧಾರೆ ಎರೆಯುತ್ತಿದ್ದಾರೆ.
Subscribe to Updates
Get the latest creative news from FooBar about art, design and business.