Subscribe to Updates

    Get the latest creative news from FooBar about art, design and business.

    What's Hot

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025

    ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

    June 16, 2025

    ಮನೆಮನೆ ಕನ್ನಡ ಜಾಗೃತಿ ಅಭಿಯಾನ ಉದ್ಘಾಟನೆ | ಜೂನ್ 22

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಮೇಧಾನ್ವೇಷ 2023’
    Competition

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಮೇಧಾನ್ವೇಷ 2023’

    November 21, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಲಲಿತಕಲಾ ಸಂಘ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಮೇಧಾನ್ವೇಷ 2023’ ದಿನಾಂಕ 16-11-2023 ರಂದು ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್. ಮಾಧವ ಭಟ್ ಇವರು “ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ಸಿಗುವ ಅನೇಕ ಅನುಭವಗಳನ್ನು ಸಂಗ್ರಹಿಸಿಕೊಂಡಾಗ ಮಾತ್ರ ನಿಮ್ಮಲ್ಲಿನ ನೈಜ ಪ್ರತಿಭೆಗಳು ಅನಾವರಣಗೊಳ್ಳುತ್ತದೆ. ಕೆಲವು ಪ್ರತಿಭೆಗಳು ವಿದ್ಯಾರ್ಥಿಗಳಲ್ಲಿ ಹುಟ್ಟಿನಿಂದಲೇ ಕರಗತವಾಗಿದ್ದರೆ,‌ ಇನ್ನು ಕೆಲವೊಂದು ಪ್ರತಿಭೆಗಳು ಬೆಳೆಯುತ್ತ ರೂಢಿಯಾಗುತ್ತದೆ. ಇಂದಿನ ಈ ಕಾರ್ಯಕ್ರಮವು ನಿಮ್ಮಲ್ಲಿನ ನೈಜ ಪ್ರತಿಭೆಗಳ ಅನಾವರಣಕ್ಕಾಗಿ ಉತ್ತಮ ವೇದಿಕೆಯಾಗಿ ಮೂಡಿಬರಲಿ” ಎಂದು ಶುಭಹಾರೈಸಿದರು.
    ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಅಧ್ಯಕ್ಷೀಯ ಮಾತುಗಳನ್ನಾಡಿ “ಶಿಕ್ಷಣವು ಬದುಕಿಗೆ ಊರುಗೋಲಾಗಬೇಕು. ಅದು ಕೇವಲ ತರಗತಿಗಳಿಗೆ ಮಾತ್ರ ಸೀಮಿತವಾಗಿರಬಾರದು. ಪದವಿ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಕಾಲಘಟ್ಟ. ಈ ಹಂತದಲ್ಲಿ ಸವಾಲುಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತೇವೆ. ಇವು ಸಮಸ್ಯೆಗಳನ್ನು ಹೇಗೆ ಎದುರಿಸಿ ಹೊರ ಬರಬೇಕೆಂದು ತಿಳಿಸುತ್ತದೆ. ನಮಗೆ ಇಚ್ಛಾಶಕ್ತಿ ಮತ್ತು ಗುರಿ ಎಂಬುವುದು ಅಗತ್ಯ. ಸ್ಪಷ್ಟ ಗುರಿ ಇದ್ದರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ.” ಎಂದು ಅಭಿಪ್ರಾಯ ಪಟ್ಟರು.

    ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಕಲಾವಿದೆ ಶುಭ ಅಡಿಗ ಮಾತನಾಡಿ “ಅವಕಾಶಗಳು ಸಿಕ್ಕಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ. ಮಕ್ಕಳಿಗೆ ಅಗತ್ಯವಾದ ವಿಚಾರಗಳನ್ನು ಅವರೇ ಅನ್ವೇಷಣೆ ಮಾಡಬೇಕು. ವಿದ್ಯಾವಂತರು ಉತ್ತಮ ವ್ಯಕ್ತಿತ್ವದವರಾಗಿರಬೇಕು. ನಮ್ಮ ವ್ಯಕ್ತಿತ್ವವು ನಿರ್ಮಾಣಗೊಳ್ಳುವುದು ಉತ್ತಮ ಸಂಸ್ಕಾರದಿಂದ. ಅವುಗಳಿಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ. ನಮ್ಮ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಕಾಲೇಜನ್ನು ಆಯ್ದುಕೊಂಡಾಗ ನಮ್ಮಲ್ಲಿನ ಪ್ರತಿಭೆ ಬೆಳಕಿಗೆ ಬರುತ್ತದೆ. ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ.” ಎಂದು ಹೇಳಿದರು.
    ‘ಮೇಧಾನ್ವೇಷ 2023’ ಪ್ರಥಮ ವಿಜೇತರಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ದ್ವಿತೀಯ ವಿಜೇತರಾಗಿ ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರು.

    ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ವಿಶೇಷ ಆಡಳಿತಾಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನ್ಯಾಕ್.ಬಿ, ಪರೀಕ್ಷಾಂಗ ಕುಲಸಚಿವ ಡಾ.ಹೆಚ್.ಜಿ.ಶ್ರೀಧರ್, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಸ್ವಾಗತಿಸಿ, ಲಲಿತ ಕಲಾ ಸಂಘದ ಸಂಯೋಜಕಿ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ.ಎಸ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪೆರ್ಲದಲ್ಲಿ ಮಕ್ಕಳ ನಾಟಕೋತ್ಸವ ರಂಗಾಭಿನಯ ತರಬೇತಿಗೆ ಚಾಲನೆ
    Next Article ಮಡಿಕೇರಿಯ ರಾಜೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ದತ್ತಿ ಉಪನ್ಯಾಸ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಾಜ್ಯಮಟ್ಟದ ‘ಕನ್ನಡ ಜಾನಪದ ಸಮ್ಮೇಳನ’ದಲ್ಲಿ ಜಾನಪದ ಸ್ಪರ್ಧೆ | ಕೊನೆಯ ದಿನಾಂಕ ಜೂನ್ 25

    June 14, 2025

    ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

    June 14, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025

    ಮಂಗಳೂರು ವಿಶ್ವವಿದ್ಯಾನಿಲಯದ ‘ಸಂಭ್ರಮ 2025’ ಸಾಂಸ್ಕ್ರತಿಕ ಸ್ವರ್ಧೆ

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.