ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಎಂಟನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ‘ಹರಿಕಥಾ ಸ್ಪರ್ಧೆ 2023’
ಪ್ರಾಥಮಿಕ ಹಂತದ ಸ್ಪರ್ಧೆಗೆ ಹದಿನೈದು ನಿಮಿಷಗಳಿಗೆ ಮೀರದ ಹರಿಕಥಾ ಪ್ರಸ್ತುತಿಯ ತಮ್ಮ ವಿಡಿಯೋವನ್ನು ಈ ಕೆಳಗೆ ನೀಡಿರುವ ಈ ಮೇಲ್ ಅಥವಾ ವಾಟ್ಸಪ್ ಸಂಖ್ಯೆಗೆ ದಿನಾಂಕ 15-12-2023ರ ಒಳಗಾಗಿ ಹೆಸರು, ವಿದ್ಯಾಸಂಸ್ಥೆ, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ಕಳುಹಿಸಬೇಕು. ಇದರಲ್ಲಿ ಆಯ್ಕೆಯಾದ ಹನ್ನೆರಡು ಮಂದಿ ಸ್ಪರ್ಧಿಗಳಿಗೆ ದಿನಾಂಕ 31-12-2023ರಂದು ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಅಂತಿಮ ಸುತ್ತಿನಲ್ಲಿ 25 ನಿಮಿಷಗಳ ಸರ್ವಾಂಗೀಣ ಹರಿಕಥಾ ಪ್ರದರ್ಶನವನ್ನು ವೇದಿಕೆಯಲ್ಲಿ, ಪಕ್ಕವಾದ್ಯಗಳೊಂದಿಗೆ ಸ್ಪರ್ಧಿಯು ನೀಡಬೇಕಾಗುವುದು. ನಿರ್ಣಾಯಕರ ತೀರ್ಮಾನ ಅಂತಿಮವಾಗಿರುತ್ತದೆ. ವಿಡಿಯೋ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 9945370655 ಮತ್ತು ಇಮೇಲ್ ವಿಳಾಸ : [email protected]
ಈ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ರೂ.10,000/- ದ್ವಿತೀಯ ಬಹುಮಾನ ರೂ.7,000/- ಮತ್ತು ತೃತೀಯ ಬಹುಮಾನ ರೂ.4,000/- ವನ್ನು ನೀಡಲಾಗುವುದು. ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ಕಾರ್ಯದರ್ಶಿ, ಹರಿಕಥಾ ಪರಿಷತ್, ಮಂಗಳೂರು 9448104134