ಹೊನ್ನಾವರ : ‘ಪ್ರತಿಮಾ ಕೊಂಕಣಿ ಸಾಂಸ್ಕೃತಿಕ್ ಕಲಾ ವೇದಿ’ ಸಂಸ್ಥೆಯ ವತಿಯಿಂದ ಪ್ರತಿಭೋದಯದ ಶರಾವತಿ ಕಲಾ ಮಂದಿರದಲ್ಲಿ ದಿನಾಂಕ 19-11-2023 ರವಿವಾರದಂದು ಹೊನ್ನಾವರ, ಭಟ್ಕಳ ಕುಮಟಾ ಡಿನರಿ ಮಟ್ಟದಲ್ಲಿ ಕೊಂಕಣಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಹೊನ್ನಾವರ ಚರ್ಚಿನ ಮುಖ್ಯ ಗುರುಗಳಾದ ವಂದನೀಯ ಪಾದರ್ ಸಾಲ್ವಾದೋರ್ ಗೊನ್ಸಾಲ್ವಿಸ್ ಹಾಗೂ ಸಭಾಧ್ಯಕ್ಷರಾಗಿ ಹೊನ್ನಾವರ ಡಿನರಿಯ ಡೀನ್ ವಂದನೀಯ ಪಾಧರ್ ಥೊಮಸ್ ಫರ್ನಾಂಡಿಸ್ ಹಾಗೂ ಮುಖ್ಯ ಅತಿಥಿಗಳಾಗಿ ನಾಗರಿಕ ವಾರ ಪತ್ರಿಕೆಯ ಸಂಪಾದಕರಾದ ಶ್ರೀಯುತ ಕೃಷ್ಣಮೂರ್ತಿ ಹೆಬ್ಬಾರ ಹಾಗೂ ಅತಿಥಿಗಳಾಗಿ ಸಾನಾಮೋಟಾ ಚರ್ಚಿನ ವಂದನೀಯ ಫಾದರ್ ಜೊನ್ಸನ್ ಫರ್ನಾಂಡಿಸ್, ರೊಜ್‌ಮೇರಿ ಕ್ರೆಡಿಟ್ ಸೌಹಾರ್ದದ ಕಾರ್ಯನಿರ್ವಾಹಕರಾದ ಶ್ರೀಮತಿ ಸವಿತಾ ರೇಷ್ಮಾ ಫರ್ನಾಂಡಿಸ್, ಹೊನ್ನಾವರ ಪ್ರತಿಷ್ಠಿತ ಹೋಟೇಲ್ ಗ್ರೀನ್ ಪಾರ್ಕಿನ ಮಾಲೀಕರಾದ ಶ್ರೀ ಗಣೇಶ ಅರವಾರೆ ಹಾಗೂ ಸನ್ಮಾನಿತರಾದ ಶ್ರೀ ಸ್ಯಾಮ್ಸನ್ ಡಿಸೋಜಾ ಸಮಾಜ ಸೇವಕ ಕಾರವಾರ, ಶ್ರೀ ನಿತ್ಯಾನಂದ ನಾಯಕ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾನಾಮೋಟಾ, ಶ್ರೀಮತಿ ಗ್ಲೋರಿಯಾ ಗೊನ್ಸಾಲ್ವಿಸ್ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗರೆ ಇವರುಗಳು ಭಾಗವಹಿಸಿದ್ದರು.
ನಿರ್ಣಯಕರಾಗಿ ಮಂಗಳೂರಿನ ಪ್ರತಿಷ್ಠಿತ ಕೊಮಿಡಿ ಕಂಪನಿ ಇದರ ಕಲಾವಿದರಾದ ಶ್ರೀ ನೆಲ್ಲು ಪೆರ್ಮನೂರ್, ಕುಮಾರಿ ಮಾರಿಯಾ ಡಿಸೋಜಾ ಹಾಗೂ ನಿವೃತ ಶಿಕ್ಷಕರಾದ ಕೆ.ಆರ್.ಭಟ್, ಪ್ರತಿಮಾ ಕೊಂಕಣಿ ಸಾಂಸ್ಕೃತಿಕ್ ಕಲಾವೇದಿಯ ಸಂಘಟಕರಾದ ಶ್ರೀ ಇಂತ್ರು ಡಿಸೋಜಾ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಸಂತ ಪೇತ್ರರ ದೇವಾಲಯ ಸಾನಾಮೋಟಾ,
ದ್ವಿತೀಯ ಸ್ಥಾನ – ಹೊಲಿಕ್ರಾಸ್ ಚಾಪೆಲ್ ಮೋಟೊ,
ತೃತೀಯ ಸ್ಥಾನ – ರಾಕಣ್ ಭಡ್ವೊ ಚಾಪೆಲ್, ಜನ್ನಕಡ್ಕಲ್
ಉತ್ತಮ ನಟ – ಶ್ರೀ ಝೇವಿಯರ್ ಹೊರ್ಟಾ, ಸಾನಾಮೋಟಾ
ಉತ್ತಮ ನಟಿ – ಶ್ರೀಮತಿ ಸುಶ್ಮಿತಾ ಪಿಂಟೊ, ಸಾನಾಮೋಟಾ
ಉತ್ತಮ ಖಳನಟ – ಶ್ರೀ ಬಸ್ತೇಂವ್ ರೊಡ್ರಿಗಿಸ್, ಮೋಟೊ
ಉತ್ತಮ ಖಳನಟಿ – ಕುಮಾರಿ ಸಾರಾ ಹೊರ್ಟಾ, ಸಾನಾಮೋಟಾ
ಉತ್ತಮ ಹಾಸ್ಯನಟ – ಕುಮಾರ ಸಾಮ್ಯುಯೆಲ್ ಲೋಪಿಸ್, ಮೋಟೊ
ಉತ್ತಮ ಹಾಸ್ಯನಟಿ – ಕುಮಾರಿ ರೀನಾ ಹೋರ್ಟಾ, ಸಾನಾಮೋಟೊ
ಉತ್ತಮ ಕಥೆ – ಶ್ರೀ ಝೇವಿಯರ್ ಹೊರ್ಟಾ, ಸಾನಾಮೋಟಾ
ಉತ್ತಮ ನಿರ್ದೇಶಕ – ಶ್ರೀ ಝೇವಿಯರ್ ಹೊರ್ಟಾ, ಸಾನಾಮೋಟಾ
ಇವರಿಗೆಲ್ಲರಿಗೂ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು. ಪ್ರತಿಯೊಂದು ತಂಡದ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಈ ಸ್ಪರ್ಧೆಯಲ್ಲಿ 63 ಕಲಾವಿದರು ಭಾಗವಹಿಸಿದರು. ಕೊಂಕಣಿ ಭಾಷೆ ಹಾಗೂ ಸಂಸ್ಕೃತಿ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಂಘಟಕರು ಸಂಘಟಿಸಿದರು. ಕಾರ್ಯ ನಿರೂಪಣೆಯನ್ನು ಶ್ರೀ ಸ್ಟೀವನ್ ಲೋಪಿಸ್ ಹಾಗೂ ಕುಮಾರಿ ಮರಿಸ್ಸಾ ಗೊನ್ಸಾಲ್ವಿಸ್ ನಿರೂಪಿಸಿದ್ದರು. ಸಂಘದ ಪ್ರಾಸ್ತಾವಿಕ ಹಾಗೂ ವರದಿಯನ್ನು ಸಂಘದ ಸಹ ಕಾರ್ಯದರ್ಶಿ ಕುಮಾರಿ ಶಮಾ ಡಿ’ಸೋಜಾ ಮಂಡಿಸಿದರು. ಶ್ರೀಮತಿ ಮಾಕ್ಸಿಮಾ ರೊಡ್ರಿಗಿಸ್ ಸ್ವಾಗತಿಸಿ ಸಂಘಟನೆಯ ಸಂಘಟಕರಾದ ಶ್ರೀ ಇಂತ್ರು ಡಿ’ಸೋಜಾ ವಂದನಾರ್ಪಣೆಯನ್ನು ಸಲ್ಲಿಸಿದರು.
ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ಇದರ ತಾಲೂಕು ಅಧ್ಯಕ್ಷರಾದ ಶ್ರೀಯುತ ಎಸ್.ಎಚ್. ಗೌಡ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಸ್ಪರ್ಧಾಳು ಶ್ರೀ ಉಲ್ಲಾಸ ಲೋಪಿಸ್ ಮೋಟೊ ತನ್ನ ಅನುಭವ ಹಂಚಿಕೊಂಡರು.