ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸ್ಸೋಸಿಯೇಷನ್, ಸಮುದಾಯ ಬೆಂಗಳೂರು ಮತ್ತು ರಾಗಿ ಕಣ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುತ್ತಿರುವ ಪ್ರೀತಿ ಸಹಬಾಳ್ವೆಯ ಯಾತ್ರೆ ‘ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ’ ಬೆಂಗಳೂರು ಮತ್ತು ಮಂಗಳೂರಿನ ವಿವಿಧೆಡೆ ದಿನಾಂಕ 01-12-2023ರಿಂದ 07-12-2023ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿರುವ ಕಾರ್ಯಕ್ರಮಗಳು ತತ್ವ ಪದಗಳು, ವಚನ ಗಾಯನ, ಬೀದಿ ನಾಟಕ, ಗ್ರಾಮೀಣ ಜನರೊಡನೆ ವಾಸ್ತವ್ಯ ಮತ್ತು ಆತ್ಮೀಯ ಸಂವಾದ, ತಿಳಿಕಲಿ – ಮಾತುಕತೆ, ಹೊಸ ಕಲಿಕೆ – ಹೊಸ ಜ್ಞಾನ – ಹೊಸ ಅರಿವು.
ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಉದ್ಘಾಟನೆಗೊಂಡು ದಿನಾಂಕ 02-12-2023ರಂದು ಮಧ್ಯಾಹ್ನ ಗಂಟೆ 2ಕ್ಕೆ ಜಾಲಹಳ್ಳಿ ಸರ್ಕಲ್, ಸಂಜೆ ಗಂಟೆ 5ಕ್ಕೆ ಎಂ.ಜಿ. ರಸ್ತೆ ಮೆಟ್ರೋ ಮತ್ತು ಕಾವೇರಿ ಎಂಪೋರಿಯಂ ಬಳಿ ಮತ್ತು ದಿನಾಂಕ 03-12-2023ರಂದು ಬೆಳಿಗ್ಗೆ ಗಂಟೆ 10ರಿಂದ ರಾಗಿ ಕಣ ಸಂತೆ ಆವರಣದಲ್ಲಿ ‘ಕಲ್ಲಂಗಡಿ ಹಣ್ಣಿನ ಕಥೆ’ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 02-12-2023ರಂದು ಬೆಳಿಗ್ಗೆ ಗಂಟೆ 10ಕ್ಕೆ ಮಂಗಳೂರಿನ ಟ್ಯಾಗೋರ್ ಪಾರ್ಕಿನ ಮಹಾತ್ಮ ಗಾಂಧಿ ಪುತ್ತಳಿ ಎದುರು ಉದ್ಘಾಟನೆಗೊಂಡು ಮಂಗಳೂರಿನಿಂದ ಮಂಜೇಶ್ವರ (ಕಾಸರಗೋಡು)ದವರೆಗೆ ಕಾಲು ನಡಿಗೆ ಜಾಥಾ ನಡೆಯಲಿದೆ. ದಿನಾಂಕ 07-12-2023ರಂದು ಬೆಳಿಗ್ಗೆ ಗಂಟೆ 10ಕ್ಕೆ ಮಂಜೇಶ್ವರ, ರಾಷ್ಟ್ರಕವಿ ಎಮ್. ಗೋವಿಂದ ಪೈ ಸಭಾಂಗಣದ ಗಿಳಿವಿಂಡು ಭವನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ.