ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ದಿನಾಂಕ 30-12-2023 ಶನಿವಾರದಂದು ನಡೆಯಲಿರುವ ಉಡುಪಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೃಹಣಿಯರಿಗಾಗಿ ಕಥಾ ಗೋಷ್ಠಿ ಆಯೋಜಿಸಿದ್ದು ,ಆಸಕ್ತ ಗೃಹಿಣಿಯರು ಪೋಸ್ಟ್ ಕಾರ್ಡ್ ಮೂಲಕ ತಮ್ಮ ಅಡುಗೆಮನೆ ವಾರ್ತೆಯ ಕಥೆಗಳನ್ನು ದಿನಾಂಕ 02-12-2023ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಆಯ್ದ ಆರು ಕಥೆಗಳ ಲೇಖಕಿಯರಿಗೆ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಭಾಗವಹಿಸಿ ಕಥೆಯನ್ನು ವಾಚಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗುವುದು.
ಕಳುಹಿಸಬೇಕಾದ ವಿಳಾಸ : ಜನಾರ್ದನ ಕೊಡವೂರು, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ‘ಭಾಮಾ’, ಉಡುಪ ಲೇನ್, ಕೊಡವೂರು, ಕ್ರೋಡಾಶ್ರಮ, ಉಡುಪಿ – 576106. ಹೆಚ್ಚಿನ ವಿವರಗಳಿಗೆ ಶ್ರೀ ರವಿರಾಜ್ ಎಚ್.ಪಿ., ಅಧ್ಯಕ್ಷರು 98452 40309 ಸಂಪರ್ಕಿಸಬಹುದು.