ಉಡುಪಿ : ತುಳು ಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ದಿ. ನಿಟ್ಟೂರು ಸಂಜೀವ ಭಂಡಾರಿ ನೆನಪಿನಲ್ಲಿ ‘ತುಳು ಭಾವಗೀತೆ ಪಂಥೊ -2023’ ಕಾರ್ಯಕ್ರಮವು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಇಲ್ಲಿ ದಿನಾಂಕ 26-11-2023ರಂದು ನಡೆಯಿತು. ತುಳು ಸುಗಮ ಸಂಗೀತ ಕಲಾವಿದ ಶ್ರೀ ಬಿ.ಕೆ. ಕಾರಂತ್ ಜ್ಯೋತಿ ಬೆಳಗಿಸಿ ಭಾವಗೀತೆ ಹಾಡುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ “ಉಸಿರು ನಿಂತರೂ ಹೆಸರು ಉಳಿಸಿಸುವ ಕಾರ್ಯಕ್ರಮವನ್ನು ನಿರಂತರ ತುಳುಕೂಟ ಮಾಡುತ್ತಿದೆ. ಒಳ್ಳೆ ಕೆಲಸ ಮಾಡಿದವರ ಹೆಸರು ಅಜರಾಮರವಾಗಿರಬೇಕು. ಶಾಲೆಗೆ ಸೇರಿಸುವಾಗ ಮಾತೃ ಭಾಷೆ ತುಳು ಎಂದು ನಮೂದಿಸಿ. ಹತ್ತು ವರ್ಷದ ಬಳಿಕ ತುಳು ಕೋಟಾದಲ್ಲಿ ಸೀಟು ಸಿಗುವುದು” ಎಂದು ಹೇಳಿದರು.
“ಭಾವಗೀತೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ತಂತಜ್ಞಾನದೊಂದಿಗೆ ನಮ್ಮತನವನ್ನು ಬಿಟ್ಟುಕೊಡಬಾರದು” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆಯ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಬಾಲಪ್ರತಿಭೆ ರೀತುಶ್ರೀಯವರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಶ್ರೀ ಗಂಗಾಧರ್ ಕಿದಿಯೂರು, ಮನೋರಮಾ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕ ಜಯರಾಂ ಸ್ವಾಗತಿಸಿ, ಪ್ರಸ್ತಾವಿಸಿದರು. ವಿದ್ಯಾ ಸರಸ್ವತಿ ನಿರೂಪಿಸಿದರು. ಪ್ರಭಾಕರ್ ಭಂಡಾರಿ ವಂದಿಸಿದರು.
ಈ ಸ್ಪರ್ಧೆಗೆ ಒಟ್ಟು 115 ಮಕ್ಕಳು ಹಾಗೂ ಸಾರ್ವಜನಿಕರು ನೋಂದಣಿ ಮಾಡಿದ್ದು, ತುಳು ಭಾವಗೀತೆಯ ಮೂಲಕ ತುಳು ಭಾಷೆ ಸಂಸ್ಕೃತಿಯ ಬಗ್ಗೆ ವಿಶೇಷ ಅಭಿಯಾನಕ್ಕೆ ನಾಂದಿ ಹಾಡಿದೆ. ಈ ತುಳು ಭಾವಗೀತೆ ಸ್ಪರ್ಧೆಯಲ್ಲಿ 6 ವರ್ಷದಿಂದ 82 ವರ್ಷ ವಯಸ್ಸಿನವರು ಭಾಗವಹಿಸಿದ್ದರು. ಸ್ಪರ್ಧೆಯು 1ರಿಂದ 5ನೇ ತರಗತಿಯವರಿಗೆ ಬಾಲವಿಭಾಗ, 6ರಿಂದ 10ನೇ ತರಗತಿಯವರಿಗೆ ಕಿರಿಯ ವಿಭಾಗ, ಕಾಲೇಜ್ ವಿದ್ಯಾರ್ಥಿಗಳಿಗೆ ಹಿರಿಯ ವಿಭಾಗ ಮತ್ತು 25 ವರ್ಷ ಮೇಲ್ಪಟ್ಟು ಸಾರ್ವಜನಿಕ ವಿಭಾಗ ಎಂದು ನಾಲ್ಕು ವಿಭಾಗಗಳಲ್ಲಿ ನಡೆಯಿತು.
ಬಹುಮಾನ ವಿಜೇತರು
ಬಾಲವಿಭಾಗ
ಸ್ವಸ್ತಿ ಎಂ. ಭಟ್ I
ದೃಶ್ಯ ಡಿ.ಎಸ್. II
ಮಾನ್ವಿ ಪಿ. ಶೆಟ್ಟಿ III
ಕಿರಿಯ ವಿಭಾಗ
ಪ್ರಾರ್ಥನಾ ಭಟ್ I
ಪ್ರಜನ್ಯ ಕೆ. ರಾವ್ II
ಆರಾಧ್ಯ ಆರ್.ಪಿ. III
ಹಿರಿಯ ವಿಭಾಗ
ಶ್ರೀಜಾ I
ಸೌಜನ್ಯ II
ಚಿನ್ಮಯ್ ರಾವ್ III
ಸಾರ್ವಜನಿಕ ವಿಭಾಗ
ಶಕುಂತಲಾ ಅದಮಾರು I
ಸುಜಲ ವಿ. ಭಟ್ II
ಕೆ.ಆರ್. ಮಂಜುನಾಥ ಆಚಾರ್ಯ III
ವಿಶೇಷ ಬಹುಮಾನ
ವಿಠಲ ಜಿ. ಪೂಜಾರಿ
ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ನಗದು, ಸ್ಮರಣಿಕೆ ಅಲ್ಲದೇ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಪ್ರದಾನಿಸಲಾಯಿತು.
ತುಳು ಭಾವಗೀತೆಯ ಉದ್ಘಾಟನಾ ಸಮಾರಂಭ
ದಿ|| ನಿಟ್ಟೂರು ಸಂಜೀವ ಭಂಡಾರಿಗೆ ಪುಷ್ಪಾಂಜಲಿ
ತುಳು ಭಾವಗೀತೆಯ ಬಹುಮಾನ ವಿಜೇತರು
ತುಳು ಭಾವಗೀತೆಯ ಬಹುಮಾನ ವಿಜೇತರು