ಮಂಗಳೂರು : ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ಸಮಿತಿ ಆಶ್ರಯದಲ್ಲಿ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ತನ್ನ ಮುಖ್ಯ ಭಾಷಣದಲ್ಲಿ ಸಂಸ್ಕಾರಯುತವಾದ ಕಾರ್ಯಕ್ರಮ ಸಂಸ್ಕಾರ ಭಾರತೀಯದ್ದು. ಸಂಸ್ಕಾರ ಭಾರತೀ ಸಂಸ್ಕೃತಿಯಿಂದ ಕೂಡಿದೆ. ಸಂಸ್ಕಾರ ಭಾರತೀ ಅರ್ಥಪೂರ್ಣವಾದ ಹೆಸರು ಹೀಗೆ ಸಂಸ್ಕಾರ ಭಾರತೀಯ ಹೆಸರಿನ ವಿಶ್ಲೇಷಣೆ ಮಾಡಿದರು. ಭಾರತೀಯರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ಉದ್ದೀಪನ ಮಾಡುವ ಸತ್ಕಾರ್ಯ ಸಂಸ್ಕಾರ ಭಾರತೀ ಮಾಡುತ್ತಿದೆ. ಭಾರತ ಮಾತೆಯ ಬಗ್ಗೆ, ಸನಾತನ ಧರ್ಮದ ಬಗ್ಗೆ, ನಮ್ಮ ಆಚಾರ ನೀತಿಯ ಬಗ್ಗೆ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲರ ಮನ ಮುಟ್ಟುವಂತೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಕಾರ ಭಾರತೀ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಸಂಸ್ಕಾರ ಭಾರತೀ ಪ್ರಾಂತ ಕಾರ್ಯದರ್ಶಿ ಶ್ರೀಪತಿ ಬೆಂಗಳೂರು ಇವರು 2024ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಅಖಿಲ ಭಾರತ ಕಲಾ ಸಾಧಕ ಸಂಗಮದ ಬಗ್ಗೆ ಮಾಹಿತಿ ನೀಡಿದರು. ದೀಪಾವಳಿ ಕುಟುಂಬ ಮಿಲನದ ಸಮಾರಂಭಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಡ್ಯಾರ್ ಶ್ರೀ ಮಾಧವ ನಾಯಕ್ (ಆರ್.ಕೆ. ಟ್ರಾವೆಲ್ಸ್, ಅಡ್ಯಾರ್) ಆಗಮಿಸಿದ್ದರು. ಕೋಡಿಕಲ್ ಇಲ್ಲಿನ ಸರಯೂ ಬಾಲ ಯಕ್ಷ ವೃಂದದ ಕಲಾವಿದರಿಂದ ವರ್ಕಾಡಿ ರವಿ ಅಲೆವೂರಾಯ ಇವರ ನಿರ್ದೇಶನದಲ್ಲಿ ‘ಮಹರ್ಷಿ ವಾಲ್ಮೀಕಿ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಅಂಬಾತನಯ ಅರ್ನಾಡಿ, ಅನಂತಕೃಷ್ಣ ಹೊಳ್ಳ ಹಿಮ್ಮೇಳದಲ್ಲಿದ್ದರು. ನಂತರ ಶ್ರೀ ಬಾಲಕೃಷ್ಣ ಕತ್ತಲ್ ಸಾರ್ ಮತ್ತು ಬಳಗದವರಿಂದ ‘ತುಳುನಾಡ ಬಲೀoದ್ರ ಲೆಪ್ಪದ ಪೊರ್ಲು’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ತೋನ್ಸೆ ಪುಷ್ಕಳ ಕುಮಾರ್ (ಸಂಗೀತ ಕ್ಷೇತ್ರ), ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರ ಶೇಖರ ನಾವಡ (ನೃತ್ಯ), ಶ್ರೀ ಶರತ್ ಕುಮಾರ್ ಕದ್ರಿ (ಯಕ್ಷಗಾನ), ಶ್ರೀ ಬಿ.ಕೆ. ಗಂಗಾಧರ್ ಕಿರೋಡಿಯನ್ (ನಾಟಕ) ಮತ್ತು ಶ್ರೀ ಬಾಲಕೃಷ್ಣ ಕತ್ತಲ್ಸಾರ್ (ಲೋಕಕಲಾ) ಇವರುಗಳು ಸಲ್ಲಿಸಿದ ಗಣನೀಯ ಸೇವೆಗಾಗಿ ‘ಸಂಸ್ಕಾರ ಭಾರತೀ ಕಲಾ ಪುರಸ್ಕಾರ’ ನೀಡಲಾಯಿತು.
ದಯಾನಂದ ಜಿ. ಕತ್ತಲ್ಸಾರ್, ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್., ಅಕ್ಷಯ ಸುವರ್ಣ, ಉಜಿರೆ ವೀಣಾ ಕೆ., ಸಂಸ್ಕಾರ ಭಾರತಿಯ ಪದಾಧಿಕಾರಿಗಳಾದ ಶ್ರೀಪತಿ ಬೆಂಗಳೂರು, ಶ್ರೀ ಚಂದ್ರಶೇಖರ ಶೆಟ್ಟಿ, ಮಾಧವ ಭಂಡಾರಿ, ಗಣೇಶ್ ಬೋಳ್ಳರು. ನಾಗರಾಜ ಶೆಟ್ಟಿ, ಧನಪಾಲ ಶೆಟ್ಟಿಗಾರ್, ರಘುವೀರ ಗಟ್ಟಿ ಮತ್ತು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ವಿಭಾಗ ಸಂಚಾಲಕ ಮಾಧವ ಭಂಡಾರಿ ವಂದಿಸಿ, ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ನಿರೂಪಣೆಗೈದರು. ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ಸಮಿತಿಯ ಕಾರ್ಯದರ್ಶಿ ಗಣೇಶ್ ಬೋಳೂರು, ಉಪಾಧ್ಯಕ್ಷ ಶ್ರೀ ಧನಪಾಲ್ ಶೆಟ್ಟಿಗಾರ್, ಪ್ರಾಂತ ಕಾರ್ಯದರ್ಶಿ ಶ್ರೀ ನಾಗರಾಜ್ ಶೆಟ್ಟಿ, ಪ್ರಾಂತ ಕೋಶಾಧಿಕಾರಿ ಶ್ರೀ ರಘುವೀರ್ ಗಟ್ಟಿ, ಮಂಗಳೂರು ಸಂಸ್ಕಾರ ಭಾರತೀಯ ಕೋಶಾಧಿಕಾರಿ ಶ್ರೀಮತಿ ಚಂದ್ರಪ್ರಭಾ ಕುಲಾಲ್ ಸಹಕರಿಸಿದರು.