ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿರುವ, ಕರ್ನಾಟಕಕ್ಕೆ ವಿಶಿಷ್ಟವಾಗಿರುವ ಕಲೆ ಯಕ್ಷಗಾನ. ಯಕ್ಷಗಾನದ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹು ಪ್ರಸಿದ್ದ ಕಲೆ ಅದು. ಯಕ್ಷಗಾನದಿಂದ ಪ್ರೇರಿತವಾದ ಆದರೆ ಯಕ್ಷಗಾನಕ್ಕಿಂತ ಭಿನ್ನವಾಗಿ ಬೆಳೆದ ಪ್ರಾಕಾರ ಯಕ್ಷಗಾನ ತಾಳಮದ್ದಲೆ. ಯಕ್ಷಗಾನದ ಅಂಗವಾದ, ಯಕ್ಷಗಾನ ತಾಳಮದ್ದಲೆ ಅದರ ಜೊತೆ ಜೊತೆಗೇ ಬೆಳೆದು ಬಂದಿದೆ. ಕೆಲ ಸಂಶೋಧಕರು, ತಾಳಮದ್ದಲೆ ಎಂಬ ಕಲಾಪ್ರಕಾರ ಯಕ್ಷಗಾನಕ್ಕಿಂತಲೂ ಮೊದಲೇ ಇದ್ದಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ತಾವು ಪಾತ್ರವಾಗುವುದರ ಜತೆಗೆ ನೋಡುಗರನ್ನು ಪಾತ್ರದ ಪರಿಸರದೊಳಕ್ಕೆ ಎಳೆದೊಯ್ಯುವ ಅನೂಹ್ಯ ಸಾಧ್ಯತೆ ಇರುವ ಈ ತಾಳಮದ್ದಲೆ ನಿಜಕ್ಕೂ ಅದ್ಭುತ ಕಲೆ. ಯಾವುದೇ ವೇಷಭೂಷಣಗಳಿಲ್ಲದೇ, ಬರಿಯ ಮಾತೇ ಪ್ರಧಾನವಾಗಿರುವ ಕಲೆ ತಾಳಮದ್ದಲೆ. ಮಾತಿನ ಮಂಥನ, ಜಿಜ್ಞಾಸೆ, ಚರ್ಚೆ, ವಾದಗಳೇ ಕೂಟವೊಂದರ ಬಂಡವಾಳ. ತಾಳಮದ್ದಲೆಯ ಅರ್ಥಧಾರಿಗಳು ಸದಾ ಅಧ್ಯಯನ ನಿರತರು. ಒಂದು ಪ್ರಸಂಗದ ಯಾವುದೋ ಒಂದು ಸನ್ನಿವೇಶವನ್ನು ಎದುರಿಸುವಾಗ ಅದೆಷ್ಟು ಪುರಾಣಗಳ, ಇತಿಹಾಸದ ಘಟನೆಗಳನ್ನು ಉಲ್ಲೇಖಿಸುತ್ತಾರೆಂದರೆ, ಕೇಳುಗ ಬೆರಗಾಗದೇ ಬೇರೆದಾರಿಯಿಲ್ಲ. ಕೂತಲ್ಲೇ ನಮಗೂ ಜ್ಞಾನಾರ್ಜನೆ ಕೂಡ.
ಇಂದು ತಾಳಮದ್ದಲೆ ಹಲವು ಬದಲಾವಣೆಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ರಾತ್ರಿಯಿಡೀ ಜರುಗುವ ಆರೆಂಟು ತಾಸುಗಳ ಕೂಟಗಳು ಕಡಿಮೆಯಾಗುತ್ತಿವೆ. ಕಾಲದ ಜೊತೆಗೆ ತಾನೂ ಬದಲಾಗಬೇಕಾದ ಅನಿವಾರ್ಯತೆ ತಾಳಮದ್ದಲೆಗೆ ಬಂದೊದಗಿದೆ. ಈಗೀಗ ಮೂರು ತಾಸಿನ ತಾಳಮದ್ದಲೆಗಳು ಹೆಚ್ಚುತ್ತಿವೆ. ರೇಡಿಯೋದಲ್ಲಂತೂ ಒಂದೇ ತಾಸಿನ ತಾಳಮದ್ದಲೆ. ಹಿಂದಿನಂತೆ ದೊಡ್ಡ ಪೀಠಿಕೆಗಳಿಂದ ಪಾತ್ರ ಚಿತ್ರಣ ಆರಂಭಿಸುತ್ತಿದ್ದವರು ಕಡಿಮೆಯಾಗಿದ್ದಾರೆ. ಗಂಭೀರ ಚಿಂತನೆಗಳನ್ನು ಕೇಳುವ ಜನ ಕಡಿಮೆಯಾಗುತ್ತಿದ್ದಾರೆ ಅನ್ನುವ ಕಾರಣಕ್ಕೆ ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ.
ಆದರೆ ಇಂದಿಗೂ ಮಲೆನಾಡಿನ ಮನೆಗಳಲ್ಲಿ, ಅದೆಷ್ಟೋ ತಾಳಮದ್ದಲೆಗಳು ಜರುಗುತ್ತವೆ. ಮದುವೆ ಮನೆಗಳು, ಉಪನಯನದಂತಹ ಧಾರ್ಮಿಕ ಕಾರ್ಯಗಳ ನಂತರ ತಾಳಮದ್ದಲೆ ಕೂಟ ಏರ್ಪಡಿಸಲಾಗುತ್ತದೆ. ದಕ್ಷಿಣೋತ್ತರ ಕನ್ನಡದಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನೂರಾರು ಯಕ್ಷಗಾನ ತಾಳಮದ್ದಲೆ ನಡೆಸುವ ಸಂಘಸಂಸ್ಥೆಗಳಿವೆ. ಯಕ್ಷಗಾನ ತಾಳಮದ್ದಲೆ ಸಪ್ತಾಹಗಳಾಗುತ್ತವೆ, ಸ್ಪರ್ಧೆಗಳು ನಡೆಯುತ್ತವೆ. ಹೊಸ ಹೊಸ ಯುವಕರು ಈ ಕ್ಷೇತ್ರವನ್ನು ತಮ್ಮ ಹವ್ಯಾಸದ ಪರಿಧಿಯೊಳಗೆ ಸೇರಿಸಿಕೊಂಡಿದ್ದಾರೆ.
ಬೆಂಗಳೂರಿನಂತಹ ಅಸಾಧ್ಯ ಬುಸ್ಯೀ ಶೆಡ್ಯೂಲಿನ ನಗರದಲ್ಲೂ ಇಂತಹ ಒಂದು ಸಾವಧಾನ ಕಲೆ 03.12.2023 ಭಾನುವಾರ ಮಧ್ಯಾಹ್ನ 02.58 ರಿಂದ ಬೆಂಗಳೂರಿನ ಕೊಡಿಗೆಹಳ್ಳಿಯ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರಗುವ ಕಾರ್ತಿಕ ದೀಪೋತ್ಸವ ಪ್ರಯುಕ್ತ ‘ಕಾರ್ತಿಕ ಕಲಾರಾಧನೆ’ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ “ರಾಜಾ ಯಯಾತಿ” ಎಂಬ ಪ್ರಸಂಗ ನಡೆಯಲಿದೆ. ಕಲಾಭಿಮಾನಿಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಿ ಹಾಗೂ ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಬೇಕು.
ರಂಗದಲ್ಲಿ ಪ್ರಜ್ವಲಿಸುವ ದೀಪಗಳು:-
ರಂಗ ನಿರ್ದೇಶಕ, ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳ.
ಆಟಕೂಟಗಳ ಸಾಮ್ರಾಟ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್.
ವಾಚೋವಿಲಾಸದ ವಿಸ್ಮಯ ಶ್ರೀ ವಾಸುದೇವರಂಗಾ ಭಟ್.
ತರ್ಕ ಭಾವಗಳ ಹೃದಯ ಸಂಗಮ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್.
ಆಟಕೂಟಗಳ ಸಾಮ್ರಾಟ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್.
ವಾಚೋವಿಲಾಸದ ವಿಸ್ಮಯ ಶ್ರೀ ವಾಸುದೇವರಂಗಾ ಭಟ್.
ತರ್ಕ ಭಾವಗಳ ಹೃದಯ ಸಂಗಮ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್.
ಚೆಂಡೆ:- ಶ್ರೀ ಅರ್ಜುನ್ ಕೊರ್ಡೆಲ್ ಹಾಗೂ ಶರವೂರು ಶಿಖಿನ್ ಶರ್ಮಾ.
ಮದ್ದಳೆ:- ಅಕ್ಷಯ್ ರಾವ್ ವಿಟ್ಲ.
ಚಕ್ರತಾಳ:- ಶಂಕರ ಜೋಯಿಸ.
ಮದ್ದಳೆ:- ಅಕ್ಷಯ್ ರಾವ್ ವಿಟ್ಲ.
ಚಕ್ರತಾಳ:- ಶಂಕರ ಜೋಯಿಸ.
ಮುಮ್ಮೇಳ:-
ಶ್ರೀ ಸುಧನ್ವ ದೇರಾಜೆ.
ಶ್ರೀ ಶಶಾಂಕ ಅರ್ನಾಡಿ
ಶ್ರೀ ರಾಜೇಶ್ ರಾವ್ ಅಜ್ಜಾವರ
ಶ್ರೀ ಸುಧನ್ವ ದೇರಾಜೆ.
ಶ್ರೀ ಶಶಾಂಕ ಅರ್ನಾಡಿ
ಶ್ರೀ ರಾಜೇಶ್ ರಾವ್ ಅಜ್ಜಾವರ
ಸರ್ವರಿಗೂ ಆದರದ ಸ್ವಾಗತ.
ಯಕ್ಷಗಾನ ವಿಶ್ವಗಾನ.
ಯಕ್ಷಗಾನ ವಿಶ್ವಗಾನ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು