ಕೇರಳ : ದೇವ್ ದಕ್ಷ ಕಲಾಕ್ಷೇತ್ರ, ಪುಲ್ಪಲ್ಲಿ ನೃತ್ಯ ಸಂಸ್ಥೆಯ ಮುಖ್ಯಸ್ಥರಾದ ನೃತ್ಯ ಗುರು ಶ್ರೀಮತಿ ರೆಸ್ಮಿ ಬಾಬು ಇವರು ದಿನಾಂಕ 10-12-2023ರ ಭಾನುವಾರದಂದು ಒಂದು ದಿನದ ‘ಭರತನಾಟ್ಯ ಕಾರ್ಯಾಗಾರ’ವನ್ನು ಹಮ್ಮಿಕೊಂಡಿದ್ದಾರೆ.
ಡಿಸೆಂಬರ್ 12 ಮತ್ತು 13ರಂದು ಕೇರಳ ನೃತ್ಯ ಕಲಾವಿದರ ಒಕ್ಕೂಟ ಮತ್ತು ದೇವ್ ದಕ್ಷ ಕಲಾಕ್ಷೇತ್ರದ ಜಂಟಿ ನೇತೃತ್ವದಲ್ಲಿ ಎರಡು ದಿನಗಳ ಅವಧಿಯ ‘ನಟ್ಟುವಾಂಗಂ ಕಾರ್ಯಾಗಾರ’ವು ನಡೆಯಲಿದೆ. ಈ ಎರಡೂ ಕಾರ್ಯಾಗಾರಗಳಲ್ಲಿ ಸೃಜನಶೀಲ ಯುವ ವಿದ್ವಾಂಸ ಹಾಗೂ ಪ್ರತಿಭಾವಂತರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.