ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ದಿನಾಂಕ 10-12-2023 ರಂದು ಸಂಜೆ ಘಂಟೆ 4.00ಕ್ಕೆ ನಗರದ ಉರ್ವಸ್ಟೋರಿನಲ್ಲಿರುವ ದೇವಾಂಗ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಮೇರು ಕಲಾವಿದ ಕೆ. ಗೋವಿಂದ ಭಟ್ ಇವರಿಗೆ ಕುಂಬ್ಳೆ ಸುಂದರ ರಾವ್ ಸಂಸ್ಕರಣಾ ಪ್ರಶಸ್ತಿ ಪ್ರದಾನದೊಂದಿಗೆ ಗೌರವಧನ 25,000 ರೂಪಾಯಿ ನೀಡಿ ಗೌರವಿಸಲಾಗುವುದು ಎಂದರು. ಉದ್ಯಮಿ ಎಂ. ಮುರಳೀದರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಉಡುಪಿಯ ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಸಂಸ್ಕರಣಾ ಹಾಗೂ ಅಭಿನಂದನಾ ಭಾಷಣ ಮಾಡಲಿರುವರು. ಸಂಜೆ ಘಂಟೆ 4.00ರಿಂದ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳಿಂದ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವಶ್ರೀ ಬಲಿಪ ಶಿವಶಂಕರ ಭಟ್, ಲಕ್ಷ್ಮೀಶ ಅಮ್ಮಣಾಯ, ಪದ್ಮನಾಭ ಉಪಾಧ್ಯಾಯ ಹಾಗೂ ನಾಗೇಶ್ ಆಚಾರ್ಯ, ಅರ್ಥಧಾರಿಗಳಾಗಿ ಸರ್ವಶ್ರೀ ವಿಟ್ಲ ಶಂಭು ಶರ್ಮಾ, ಭಾಸ್ಕರ ರೈ ಕುಕ್ಕುವಳ್ಳಿ, ರಾಧಾಕೃಷ್ಣ ಕಲ್ದಾರ್ ಹಾಗೂ ಉಜಿರೆ ಅಶೋಕ್ ಭಟ್ ಭಾಗವಹಿಸಲಿದ್ದಾರೆ. ಸಂಜೆ ಘಂಟೆ 7.30ರಿಂದ ಹವ್ಯಾಸಿ ಬಳಗ ಕದ್ರಿ ಮಂಗಳೂರು ಇವರಿಂದ ‘ಸಾಯುಜ್ಯ ಸಂಗ್ರಾಮ’ ಎಂಬ ಪುಣ್ಯಪ್ರದ ಯಕ್ಷಗಾನ ಕಥಾನಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಕುಂಬ್ಳೆ ಅವರ ಪುತ್ರ ಪ್ರಸನ್ನ ಕುಮಾರ್ ಕುಂಬ್ಳೆ ಅಳಿಯ ಸತ್ಯನಾರಾಯಣ ಕೆ., ಸಂಘಟನಾ ಸಮಿತಿಯ ಚಂದ್ರಶೇಖರ ಕೆ.ಶೆಟ್ಟಿ, ಹಾಗೂ ಶರತ್ ಕುಮಾರ್ ಕದ್ರಿ ತಮ್ಮೆಲ್ಲರ ಆತ್ಮೀಯ ಸ್ವಾಗತ ಬಯಸಿದ್ದಾರೆ.