ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಆಶ್ರಯದಲ್ಲಿ ಪ್ರಾರಂಭಿಸುತ್ತಿರುವ ‘ವಿಶ್ವಂ ಸ್ಕೂಲ್ ಆಫ್ ಆರ್ಟ್’ ಇದರ ಉದ್ಘಾಟನಾ ಸಮಾರಂಭ ಹಾಗೂ ಕಲಾ ಪ್ರದರ್ಶನವು ದಿನಾಂಕ 17-12-2023ರ ರವಿವಾರದಂದು ಪೂರ್ವಾಹ್ನ ಗಂಟೆ 10.00ಕ್ಕೆ ಮಂಗಳೂರಿನ ಟೆಂಪಲ್ ಸ್ಕ್ವಾರ್ ನಲ್ಲಿರುವ ಪ್ರೇಮ ಪ್ಲಾಝದ 2 ನೇ ಮಹಡಿಯಲ್ಲಿ ನಡೆಯಲಿದೆ.
ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ವಿಶ್ವಕರ್ಮ ಕಲಾ ಪರಿಷತ್ತಿನ , ಗೌರವಾಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾದ ಶ್ರೀ ಪಿ. ಎನ್. ಆಚಾರ್ಯ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರ ಕಲಾವಿದರು ಹಾಗೂ ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿ (ರಿ.) ಇದರ ಗೌರವಾಧ್ಯಕ್ಷರಾದ ಶ್ರೀ ಗಣೇಶ ಸೋಮಯಾಜಿ ಬಿ., ಪರಿಸರ ಹೋರಾಟಗಾರರು, ಲೇಖಕರು ಹಾಗೂ ಖ್ಯಾತ ಚಿತ್ರ ಕಲಾವಿದರಾದ ಶ್ರೀ ದಿನೇಶ ಹೊಳ್ಳ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ‘ವಿಶ್ವಂ ಸ್ಕೂಲ್ ಆಫ್ ಆರ್ಟ್’ ಇದರಲ್ಲಿ ತರಬೇತಿ ನೀಡುವ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಸ್ಥಳದಲ್ಲಿ ಏರ್ಪಡಿಸಲಾಗುತ್ತದೆ. ಕಲಾಕೃತಿಗಳ ಪ್ರದರ್ಶನವು ಪೂರ್ವಾಹ್ನ ಘಂಟೆ 10.30 ರಿಂದ ಘಂಟೆ 4.30 ರ ವರೆಗೆ ನಡೆಯಲಿದೆ.
‘ವಿಶ್ವಂ ಸ್ಕೂಲ್ ಆಫ್ ಆರ್ಟ್’ನಲ್ಲಿ ನಡೆಯಲಿರುವ ತರಗತಿಗಳ ವಿವರಗಳು ಇಂತಿವೆ
(1)ಚಿತ್ರಕಲಾ ತರಗತಿ – ಜೂನಿಯರ್ ಸೀನಿಯರ್ ಗ್ರೇಡ್ ಎಕ್ಸಾಮ್ ತರಗತಿಗಳು.
(2) ಸುಗಮ ಸಂಗೀತ ( ಗೀತ ಗಾಯನ) – ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ( ತುಳು ಹಾಗೂ ಕನ್ನಡ)
(3) ಕ್ರಾಫ್ಟ್ – ನಿಟ್ಟಿಂಗ್ ಮ್ಯಾಟ್, ಸಿಲ್ಕ್ ತ್ರೆಡ್ ಬ್ಯಾಂಗಲ್ ಮೇಕಿಂಗ್, ಬ್ರಾಸ್ಲೆಟ್ ಮೇಕಿಂಗ್, ಸ್ಟ್ರಿಂಗ್ ಆರ್ಟ್, ಲಿಪ್ಪೊನ್ ಆರ್ಟ್ ಹಾಗೂ ಮೌಲ್ಡ್ ಇಟ್ ಆರ್ಟ್
(4) ಶಿಲ್ಪ ಕಲೆ – ಗೆರಟೆ ಕಲಾಕೃತಿ, ಎಂಬೋಸ್ ಆರ್ಟ್ ಹಾಗೂ ಆವೆಮಣ್ಣಿನ ಕಲಾಕೃತಿ
(5) ಆರಿ ವರ್ಕ್ – ಜರ್ದೋಸಿ ವರ್ಕ್
ಇತರ ತರಗತಿಗಳು – ಪೋರ್ಟ್ರೈಟ್ ಕ್ಲಾಸ್, ಮೆಹಂದಿ ಕ್ಲಾಸ್, ಎಂಬೊಸ್ ಆರ್ಟ್, ರಂಗೋಲಿ ಆರ್ಟ್, ಪಾಪ್ ಅಪ್ ಆರ್ಟ್, ಚಾಕ್ ಆರ್ಟ್, ಕ್ಯಾಂಡಲ್ ಆರ್ಟ್, ಸೋಪ್ ಆರ್ಟ್, ಗೂಡು ದೀಪ ತಯಾರಿಕೆ, ಗಾಳಿಪಟ ತಯಾರಿಕೆ ಇತ್ಯಾದಿ.
ತರಗತಿಯಲ್ಲಿ ಪ್ರತೀ ತಿಂಗಳು ಓರ್ವ ಪ್ರಸಿದ್ದ ತಜ್ಞ ಕಲಾವಿದರಿಂದ ವಿಶಿಷ್ಟ ತರಬೇತಿ ಹಾಗೂ ಕಲಾ ಪ್ರದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ – 9482184197, 9972312855, 9845663331