ಉಡುಪಿ : ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮತ್ತು ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ಆಯೋಜಿಸುವ ಕರಾವಳಿ ಭರತನಾಟ್ಯ ಕಲಾವಿದರ ನೃತ್ಯ ಸಮ್ಮೇಳನ ‘ನೃತ್ಯೋತ್ಕರ್ಷ 2023’ ಭರತನಾಟ್ಯ ಪ್ರದರ್ಶನ-ವಿಚಾರ ಸಂಕಿರಣ-ಪರಿಪ್ರಶ್ನೆ ಚಿಂತನ ಮಂಥನ ಕಾರ್ಯಕ್ರಮವು ದಿನಾಂಕ 24-12-2023 ಮತ್ತು 25-12-2023ರಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ.
ದಿನಾಂಕ 24-12-2023ರಂದು ಬೆಳಿಗ್ಗೆ ಸಮ್ಮೇಳನದ ಅಧ್ಯಕ್ಷರು ಮತ್ತು ಅತಿಥಿಗಳನ್ನು ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ಹಾಗೂ ಕಲಾವಿದರು ವೈಭವೋಪೇತ ಮೆರವಣಿಗೆಯೊಂದಿಗೆ ಸಭಾಂಗಣಕ್ಕೆ ಕರೆದುಕೊಂಡು ಬರುವುದು. ನಂತರ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟಿನ ನಿರ್ದೇಶಕರಾದ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಇವರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನೆಯನ್ನು ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬಿ. ವಿಜಯ ಬಲ್ಲಾಳ್ ಇವರು ಮಾಡಲಿದ್ದಾರೆ.
ಗಂಟೆ 11.35ಕ್ಕೆ ವಿದ್ವಾನ್ ಸುಧೀರ್ ರಾವ್ ಕೊಡವೂರು – ವಿದುಷಿ ಮಾನಸಿ ಸುಧೀರ್ ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ನೃತ್ಯ ಪ್ರದರ್ಶನ, 12 ಗಂಟೆಗೆ ನಡೆಯಲಿರುವ ವಿಚಾರ ಗೋಷ್ಠಿಯಲ್ಲಿ ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದುಷಿ ಉಷಾದಾತಾರ್ ಇವರು ‘ದೇವಾಲಯ ನೃತ್ಯ’ ಎಂಬ ವಿಷಯದ ಪ್ರಸ್ತುತಿ ನೀಡಲಿದ್ದಾರೆ. ಗಂಟೆ 2ರಿಂದ ಚೆನ್ನೈಯ ರಾಜೇಶ್ ಟಿ.ಕೆ. 9 ಇವರಿಂದ ನೃತ್ಯ ಪ್ರದರ್ಶನ. ಗಂಟೆ 2.45ಕ್ಕೆ ವಿಚಾರ ಗೋಷ್ಠಿ ‘ಭಕ್ತಿಯ ವಿವಿಧ ಆಯಾಮಗಳು – ಪ್ರಾತ್ಯಕ್ಷಿಕೆ’ ಬೆಂಗಳೂರಿನ ಶ್ರೀಮತಿ ಶೀಲಾ ಚಂದ್ರ ಶೇಖರ್ ಇವರಿಂದ. ಗಂಟೆ 4.30ಕ್ಕೆ ನಡೆಯುವ ವಿಚಾರ ಗೋಷ್ಠಿಯ ವಿಷಯ ‘ಭರತನಾಟ್ಯಕ್ಕೆ ಧ್ವನಿಸುರುಳಿ/ಸಜೀವ ಹಿಮ್ಮೇಳ ಸಂಗೀತ ಸೂಕ್ತವೇ ?’ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಸಮನ್ವಯಕಾರರು, ಡಾ. ಸಾಗರ್ ತುಮಕೂರು, ವಿದುಷಿ ಭ್ರಮರಿ ಶಿವಪ್ರಕಾಶ್, ವಿದ್ವಾನ್ ಪುಲಕೇಶಿ ಕಸ್ತೂರಿ, ಡಾ. ಸಹನ ಭಟ್, ವಿದುಷಿ ಯಶಾ ರಾಮಕೃಷ್ಣ, ಡಾ. ಚೇತನಾ ರಾಧಾಕೃಷ್ಣ ಇವರುಗಳು ವಿಚಾರ ಮಂಡನೆ ಮಾಡಲಿದ್ದಾರೆ. 6.30ರಿಂದ ಚೆನ್ನೈಯ ಶೀಜಿತ್ ಕೃಷ್ಣ ಬಳಗದವರಿಂದ ನೃತ್ಯ ಪ್ರದರ್ಶನ.
ದಿನಾಂಕ 25-12-2023ರಂದು ಬೆಳಿಗ್ಗೆ 9 ಗಂಟೆಗೆ ‘ಹಾಡೊಂದು ಭಾವ ಹಲವು’ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರ ಹಾಡುಗಾರಿಕೆಗೆ ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗ ಮತ್ತು ವಿದುಷಿ ಶರ್ಮಿಳಾ ಕೆ. ರಾವ್ ವಯಲಿನ್ ನಲ್ಲಿ ಸಾಥ್ ನೀಡಲಿದ್ದಾರೆ. ಡಾ. ಕೃಪಾ ಫಡ್ಕೆ, ವಿದುಷಿ ಲಕ್ಷ್ಮೀ ಗುರುರಾಜ್, ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ್, ವಿದುಷಿ ಪದ್ಮಿನಿ ಉಪಾಧ್ಯ, ವಿದುಷಿ ಮೃದುಲಾ ರೈ ಮತ್ತು ವಿದುಷಿ ಶುಭಮಣಿ ಚಂದ್ರಶೇಖರ್ ನಾಟ್ಯ ಪ್ರಸ್ತುತಿ ಮಾಡಲಿದ್ದಾರೆ. ಗಂಟೆ 10.15ಕ್ಕೆ ವಿಚಾರ ಗೋಷ್ಠಿಯಲ್ಲಿ ‘ನೃತ್ಯದಲ್ಲಿ ಲಯ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಪ್ರವೀಣ್ ಕುಮಾರ್ ಪ್ರಸ್ತುತಿ ನೀಡಲಿದ್ದಾರೆ. ಗಂಟೆ 11.15ಕ್ಕೆ ವಿದುಷಿ ಸಂಧ್ಯಾ ಉಡುಪ, ವಿದುಷಿ ಸೌದಾಮಿನಿ ರಾವ್ ಮತ್ತು ವಿದುಷಿ ಅಪೇಕ್ಷಾ ಇವರಿಂದ ‘ತ್ರಿವಳಿ ನೃತ್ಯ’
ಗಂಟೆ 12.15ಕ್ಕೆ ನಡೆಯುವ ವಿಚಾರ ಗೋಷ್ಠಿಯ ವಿಷಯ ‘ಭರತನಾಟ್ಯ ಕಾರ್ಯಕ್ರಮ – ಸವಾಲುಗಳು – ಪರಿಹಾರ’ – ವಿದ್ವಾನ್ ಸುದರ್ಶನ್ ಎಂ.ಎಲ್. ಪುತ್ತೂರು ಸಮನ್ವಯಕಾರರು, ಡಾ. ಆರತಿ ಶೆಟ್ಟಿ, ವಿದ್ವಾನ್ ದೀಪಕ್ ಪುತ್ತೂರು, ಡಾ. ಶ್ರೀವಿದ್ಯಾ ಮುರಳೀಧರ್ ಮತ್ತು ವಿದುಷಿ ರಾಧಿಕಾ ಶೆಟ್ಟಿ ವಿಚಾರ ಮಂಡನೆ ಮಾಡಲಿದ್ದಾರೆ. 2 ಗಂಟೆಗೆ ವಿದುಷಿ ಸೌಮ್ಯ ಸುಧೀಂದ್ರ ಮತ್ತು ವಿದ್ವಾನ್ ಗಿರೀಶ್ ಪುತ್ತೂರು ಇವರು ‘ನೃತ್ಯ ರಸಪ್ರಶ್ನೆ’ ನಡೆಸಲಿದ್ದಾರೆ. ಗಂಟೆ 2.30ರಿಂದ ‘ಆಶು ಅಭಿನಯ’ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರ ಹಾಡುಗಾರಿಕೆಗೆ ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗ ಮತ್ತು ವಿದುಷಿ ಶರ್ಮಿಳಾ ಕೆ. ರಾವ್ ವಯಲಿನ್ ನಲ್ಲಿ ಸಾಥ್ ನೀಡಲಿದ್ದಾರೆ. ವಿದುಷಿ ದಿವ್ಯಾ ಪ್ರಭಾತ್, ವಿದುಷಿ ರಶ್ಮಿ ಉಡುಪ, ವಿದುಷಿ ಮಂಜರಿಚಂದ್ರ ಪುಷ್ಪರಾಜ್, ವಿದುಷಿ ನಿಶಿತಾ ಪುತ್ತೂರು, ವಿದುಷಿ ಅನನ್ಯ ಬೆಂಗಳೂರು ಮತ್ತು ವಿದ್ವಾನ್ ಸುಜಯ್ ಶ್ಯಾನ್ ಭಾಗ್ ನಾಟ್ಯ ಪ್ರಸ್ತುತಿ ಮಾಡಲಿದ್ದಾರೆ. 3.15ಕ್ಕೆ ಬೆಂಗಳೂರಿನ ವಿದುಷಿ ರೂಪಶ್ರೀ ಮಧುಸೂದನ್ ಇವರಿಂದ ‘ಭರತನಾಟ್ಯ ಪ್ರದರ್ಶನಕ್ಕೆ ಶಾಸ್ತ್ರದ ಪ್ರಾಮುಖ್ಯತೆ’ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಲಿದೆ.
ಗಂಟೆ 4.30ಕ್ಕೆ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಇದರ ನಿರ್ದೇಶಕರಾದ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬಿ. ವಿಜಯ ಬಲ್ಲಾಳ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಮತ್ತು ಪುತ್ತೂರಿನ ಎಸ್.ಡಿ.ಪಿ. ರೆಮಿಡೀಸ್ & ರಿಸರ್ಚ್ ಸೆಂಟರ್ ಇವರ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಹರಿಕೃಷ್ಣ ಪಾಣಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್ ಇವರಿಗೆ ‘ನೃತ್ಯೋತ್ಕರ್ಷ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.
1 Comment
ಸುಪರ್