ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ ನಿಮಿತ್ತ ರಾಜ್ಯ ಮಟ್ಟದ ‘ಲಲಿತ ಪ್ರಬಂಧ ಸ್ಪರ್ಧೆ’ ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಹಾಗೂ ಡಿಜಿಟಲ್ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನುನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು.
ಸ್ಪರ್ಧೆಯ ನಿಯಮಗಳು
* ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
* ಒಬ್ಬ ಸ್ಪರ್ಧಿ ಒಂದು ಪ್ರಬಂಧವನ್ನು ಮಾತ್ರ ಕಳುಹಿಸಬಹುದು.
* ಲಲಿತ ಪ್ರಬಂಧ 1000 ಪದಗಳ ಮಿತಿಯಲ್ಲಿರಬೇಕು.
* ಪ್ರಬಂಧ ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು.
* ಅನುವಾದ, ಅನುಕರಣೆ ಮತ್ತು ರೂಪಾಂತರ ಮಾಡಿದ ಪ್ರಬಂಧಗಳಿಗೆ ಅವಕಾಶವಿಲ್ಲ.
* ಪ್ರಬಂಧವನ್ನು ಟೈಪಿಸಿ, ಪಿ. ಡಿ. ಎಫ್. ರೂಪದಲ್ಲಿ ಮಾತ್ರ ಕಳುಹಿಸಬೇಕು.
* ಸ್ಪರ್ಧಿಯ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಪ್ರತ್ಯೇಕವಾಗಿ ಕಳುಹಿಸಬೇಕು.
* ಪ್ರಬಂಧವನ್ನು ಕಳುಹಿಸಲು ಕೊನೆಯ ದಿನಾಂಕ 08-01-2024
* ಫಲಿತಾಂಶವನ್ನು 12-01-2024ರಂದು ಪ್ರಕಟಿಸಲಾಗುವುದು.