ಮಂಗಳೂರು : ಸಾಧನ ಬಳಗದ ‘ಸ್ನೇಹ ಮಿಲನ’ ಕಾರ್ಯಕ್ರಮವು ದಿನಾಂಕ 10-12-2023ರಂದು ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಯೋಗೀಶ್ ಕುಮಾರ್ ಜಪ್ಪು ಮಾತನಾಡಿ, “ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಲು ಮನೆಯಲ್ಲಿ ತಾಯಿಯ ಪ್ರೋತ್ಸಾಹ ಅಗತ್ಯವಿದೆ. ಮಹಿಳೆಯರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಆಚಾರ ವಿಚಾರಗಳನ್ನು ಕಲಿಸಬೇಕು” ಎಂದರು.
ಯಕ್ಷಗಾನ ಕಲಾವಿದೆ ಪ್ರಫುಲ್ಲಾ ನಾಯಕ್ ಮಾತನಾಡಿ, “ಸಾಧನೆ ಮಾಡಿದರೆ ವಿದ್ಯೆಯನ್ನು ಕಲಿತು ಪಾರಂಗತರಾಗಬಹುದು” ಎಂದರು. ಸಬಿತಾ ಕಾಮತ್ ಸ್ವಾಗತಿಸಿ, ಮುರಳಿಧರ್ ನಾಯಕ್ ಅವರು ಪಂಚವಟಿ ಪ್ರಸಂಗದ ಪರಿಚಯ ಮಾಡಿಕೊಟ್ಟರು. ಪ್ರಕಾಶ ಶೆಣೈ ಪ್ರಸ್ತಾವಿಸಿದರು. ನರಸಿಂಹ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ಬಿ. ಗಣೇಶ್ ನಾಯಕ್ ವಂದಿಸಿ, ವಸುಧಾ ಪ್ರಭು, ವಿದ್ಯಾ ಮಾರುತಿ ಪ್ರಭು, ಸವಿತಾ ನಾಯಕ್ ಸಹಕರಿಸಿದರು. ಸವಿತಾ ಭಟ್ ಮತ್ತು ಪ್ರಣತಿ ನಾಯಕ್ ನಿರೂಪಿಸಿದರು. ಯಕ್ಷಗಾನ ಶಿಕ್ಷಕ ಶ್ರೀಕೃಷ್ಣಮೂರ್ತಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷರಂಗ ಕುಂಜಿಬೆಟ್ಟು ಉಡುಪಿ ಅವರು ಬಡಗುತಿಟ್ಟು ‘ಪಂಚವಟಿ’ ಪ್ರಸಂಗ ಪ್ರದರ್ಶಿಸಿದರು.