ಮಂಗಳೂರು : ಮಾತಾ ಅಮೃತಾನಂದಮಯಿ ಮಠ ಬೋಳೂರು ಮತ್ತು ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರ ಇದರ ಆಶ್ರಯದಲ್ಲಿ ಮಠದ 25ನೇ ವರ್ಷದ ಸಂಭ್ರಮಾಚರಣೆ ಮತ್ತು ರಾಷ್ಟ್ರೀಯ ಯುವದಿನದ ಅಂಗವಾಗಿ ‘ಯುವ ಸಾಹಿತ್ಯ ಸಮ್ಮೇಳನ 2024’ ಕಾರ್ಯಕ್ರಮವು ದಿನಾಂಕ 13-01-2024ರ ಶನಿವಾರದಂದು ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಆವರಣದಲ್ಲಿ ನಡೆಯಲಿದೆ.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ವಸಂತಕುಮಾರ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಾತಾ ಅಮೃತಾನಂದಮಯಿ ಮಠ ಮಂಗಳೂರಿನ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರೊ. ಎಂ.ಬಿ. ಪುರಾಣಿಕ್ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಪೂರ್ವಾಹ್ನ 11 ಗಂಟೆಗೆ ವೀಣಾ ಟಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪ್ರಬಂಧಗೋಷ್ಠಿ ನಡೆಯಲಿದ್ದು, ಶ್ವೇತಾ ಕಾರ್ಕಳ, ಪ್ರಜ್ಞಾ ಕೆ. ವೈ., ಪ್ರಾರ್ಥನಾ ಭಟ್, ಸೌಜನ್ಯ ಬಿ.ಎಂ. ಕೆಯ್ಯೂರು, ದೀಪ್ತಿ ಎನ್., ಮೇಘನಾ, ತೇಜಶ್ರೀ ಎಂ. ಬೇಳ, ವಿಧಾತ್ರಿ ಭಟ್ಸ, ಸಹನಾ ಬಿ.ಡಿ., ದಾಸಪ್ಪಗೌಡ, ಚೈತ್ರ ಸುರತ್ಕಲ್, ಅಮೃತಾ ಕುಂದಾಪುರ, ಸಂಜನಾ ನಾಗನಗೌಡ ಮತ್ತು ಶ್ರೀನಿಧಿ ಶೆಟ್ಟಿ ಕಾರ್ಕಳ ಇವರುಗಳು ಭಾಗವಹಿಸಲಿರುವ ಪ್ರಬಂಧಗೋಷ್ಠಿಯನ್ನು ಕಲಾವತಿ ಇವರು ನಡೆಸಿಕೊಡುವರು.
ಮಧ್ಯಾಹ್ನ 12 ಗಂಟೆಗೆ ಪ್ರವೀಣ್ ಚಂದ್ರ ಶರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಥಾಗೋಷ್ಠಿಯಲ್ಲಿ ಮಂಗಳೂರಿನ ಅಭಿಷೇಕ್ ವಿ. ಪಾಟೀಲ್, ದೇವಿಕಾ ಪಿ. ಕೊಡ್ಲಮೊಗರು, ವಿನಯಾ, ಕಾರ್ತಿಕ್ ಎಂ.ಎನ್. ಸುರತ್ಕಲ್, ಸುಶ್ಮಿತಾ ನೇರಳಕಟ್ಟೆ, ಸೃಷ್ಟಿ ಬಿ.ಐ. ಹಾಗೂ ಸೌರಭ್ ಶೆಣೈ ಕಾರ್ಕಳ ಭಾಗವಹಿಸಲಿದ್ದು, ಗಾಯತ್ರಿ ಕುಲಕರ್ಣಿ ಕಾರ್ಯಕ್ರಮವನ್ನು ನಡೆಸಿಕೊಡುವರು.
ಕಥಾಗೋಷ್ಠಿಯಲ್ಲಿ ಬಳಿಕ ಡಾ. ಬಾಲಕೃಷ್ಣ ಭಾರದ್ವಾಜ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಕೆ. ಸ್ವಾತಿ ಕಚ್ಚೂರು, ರಂಜಿತಾ ಪಿ. ಪಟ್ಟಾಜೆ, ತೇಜಸ್ವಿನಿ ಶಿವಪ್ರಸಾದ್, ಗಣೇಶ್ ಎಸ್.ಬಿ. ಕಾರ್ಕಳ, ಶ್ರೀರಾಜ್ ವಕ್ವಾಡಿ, ಕೀರ್ತಿ ಭಟ್, ತರುಣ್ ಗೌಡ ಎ., ವೈಭವಿ ರಾವ್ ಸುರತ್ಕಲ್, ಸಾರ್ಥಕ್ ಟಿ. ರೈ ಪುತ್ತೂರು ಹಾಗೂ ಅಪೂರ್ವ ಕಾರಂತ ಭಾಗವಹಿಸಲಿರುವರು. ಈ ಕಾರ್ಯಕ್ರಮವನ್ನು ಶ್ರೀಮತಿ ಮಮತಾ ನಡೆಸಿಕೊಡಲಿರುವರು.
ಸಂಜೆ ಘಂಟೆ 3.00 ರಿಂದ ಡಾ. ವಸಂತಕುಮಾರ್ ಪೆರ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಳಾರು ಸಮಾರೋಪ ನುಡಿಗಳನ್ನಾಡಲಿದ್ದು, ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ, ಡಾ. ಜೀವರಾಜ್ ಸೊರಕೆ, ಡಾ.ಬಾಲಕೃಷ್ಣ ಭಾರದ್ವಾಜ್, ವೀಣಾ ಟಿ. ಶೆಟ್ಟಿ ಹಾಗೂ ಪ್ರವೀಣ್ ಚಂದ್ರ ಶರ್ಮ ಭಾಗವಹಿಸಲಿದ್ದಾರೆ.