ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಡಾ. ಎಚ್. ವಿಶ್ವನಾಥ್ ಮತ್ತು ಇಂದಿರಾ ದತ್ತಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ದತ್ತಿ ಪ್ರಶಸ್ತಿಯು ವಿಶೇಷ ದೃಷ್ಟಿಚೇತನರಿಗೆ ಮೀಸಲಾಗಿದ್ದು, ಕರ್ನಾಟಕದಲ್ಲಿ ಹೀಗೆ ಸ್ಥಾಪಿತವಾದ ಮೊದಲ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ವಿಶೇಷ ದೃಷ್ಟಿಚೇತನರು ಯಾವುದೇ ಪ್ರಕಾರದಲ್ಲಿ ಬರೆದ ಕೃತಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. ಕೃತಿಯು ನಿರ್ದಿಷ್ಟ ವರ್ಷದಲ್ಲಿಯೇ ಪ್ರಕಟವಾಗಿರಬೇಕು ಎನ್ನುವ ನಿಯಮವಿಲ್ಲ. ತಾವು ರಚಿಸಿದ ಅರ್ಹವಾದ ಕನಿಷ್ಟ ಒಂದು ಕೃತಿಯೊಂದಿಗೆ ತಮ್ಮ ಸ್ವವಿವರವನ್ನು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-560 018 ಇಲ್ಲಿಗೆ ದಿನಾಂಕ 31-01-2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕು.