ಮಂಗಳೂರು : ಉರ್ವಮಾರ್ಕೆಟ್ ನಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿಯ ಸಹಯೋಗದಲ್ಲಿ ‘ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮ ಉದ್ಘಾಟನಾ ಸಮಾರಂಭ’ವು ದಿನಾಂಕ 18-01-2024ರಂದು ಪುರಭವನದಲ್ಲಿ ಜರುಗಿತು.
ಈ ಸಮಾರಂಭದ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
“ಭಾರತೀಯತೆ ನಿಂತಿರುವುದು ಧರ್ಮ ಮತ್ತು ಸಂಸ್ಕೃತಿಯ ನೆಲೆಯಲ್ಲಿ. ಅವೆರಡೂ ಬೆರೆತರೆ ಮಾನವ ಆಸ್ತಿಕನಾಗುತ್ತಾನೆ. ಪೂಜೆ ದೇವರನ್ನು ಸಂತೃಪ್ತಿಗೊಳಿಸಿದರೆ ಗಾಯನ ನರ್ತನಗಳು ದೇವರನ್ನು ಪ್ರಸನ್ನಗೊಳಿಸುತ್ತದೆ. ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ 30 ವರ್ಷಗಳ ಹಿಂದೆ ಆರಂಭಿಸಿದ ಸಂಸ್ಥೆಯ ನೆರಳಲ್ಲಿ ಭರತನಾಟ್ಯ ಕಲಿಸುವ ಮೂಲಕ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ್ದಾರೆ. ಅವರು ಭರತನಾಟ್ಯದ ಜತೆಗೆ ಯಕ್ಷಗಾನದಲ್ಲೂ ಗುರುತಿಸಿಕೊಂಡಿರುವುದು ಸ್ತುತ್ಯರ್ಹ” ಎಂದು ಶುಭ ಹಾರೈಸಿದರು.
ಮಧ್ಯಂತರದಲ್ಲಿ ಮಾತನಾಡಿದ ಮಹಾಗುರು ಶ್ರೀ ಮೋಹನ್ ಕುಮಾರ್ ಉಳ್ಳಾಲ್ ಅವರು ವಿದ್ಯಾರ್ಥಿಗಳ ರೇಖಾಬದ್ಧ ಅಂಗಶುದ್ಧಿ ಭಾವಶುದ್ಧಿಯಿಂದ ಕೂಡಿದ ನೃತ್ಯಪ್ರಸ್ತುತಿ ಕಂಡು ಆನಂದವಾಗಿದೆ. ಶುದ್ಧ ಭರತನಾಟ್ಯ ಶಿಕ್ಷಣವನ್ನು ಅಧ್ಯಯನಾತ್ಮಕವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವ ಪ್ರಶಿಷ್ಯೆಯನ್ನು ಶ್ಲಾಘಿಸಿ ಹರಸಿದರು.
ನಾಟ್ಯಾರಾಧನಾ ಕಲಾ ಕೇಂದ್ರ ರಿ. ಉರ್ವ, ಮಂಗಳೂರಿನ ವಿದ್ವಾನ್ ಶೋಧನ್ ಕುಮಾರ್ ಬಿ, ವಿದುಷಿ ಸತ್ಯನುಶ್ರೀ ಗುರುರಾಜ್, ಜಾಹ್ನವೀ ಶೆಟ್ಟಿ, ಸಾಧ್ವೀ ರಾವ್, ವೃಂದಾ ರಾವ್, ಸಮನ್ವಿತಾ ರಾವ್, ಧರಿತ್ರಿ ಭಿಡೆ ಹಾಗೂ ತನ್ವಿ ಪಿ. ಬೋಳೂರು, ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ‘ನೃತ್ಯ ವಂದನಾ’ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್, ವಿದುಷಿ ಶಾರದಾಮಣಿ ಶೇಖರ್ ಮಂಗಳೂರು, ವಿದುಷಿ ಗೀತಾ ಸರಳಾಯ ಕದ್ರಿ, ವಿದುಷಿ ಕಾವ್ಯ ಭಟ್ ಪೆರ್ಲ ಮುಖ್ಯ ಅಭ್ಯಾಗತರಾಗಿದ್ದರು. ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿ, ಕೋಶಾಧಿಕಾರಿ ಶ್ರೀ ಬಿ. ರತ್ನಾಕರ್ ರಾವ್, ವಿದ್ಯಾರ್ಥಿ ಸಮಿತಿಯ ಕಾರ್ಯದರ್ಶಿ ವಿದುಷಿ ಮಲ್ಲಿಕಾ ವೇಣುಗೋಪಾಲ್, ಸಂಘಟನಾ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಮಿತಿಯ ಶ್ರೀಮತಿ ನಮ್ರತಾ ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
3 Comments
Very grateful to Roovari for this wonderful coverage of the event.
Really very beautiful work👏
ಕಾರ್ಯಕ್ರಮದ ಪ್ರತಿಯೊಂದು ಮಾಹಿತಿಯನ್ನು ವಿವರವಾಗಿ ಸೊಗಸಾಗಿ ನೀಡಿದ್ದೀರಿ.
ತುಂಬು ಹೃದಯದ ಧನ್ಯವಾದಗಳು 🙏🏻🙏🏻🙏🏻