ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಬಸವ ರಾಷ್ಟ್ರೀಯ ಪುರಸ್ಕಾರ’, ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’, ‘ಟಿ. ಚೌಡಯ್ಯ ಪ್ರಶಸ್ತಿ’ ಹಾಗೂ ’ಗಾನ ಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ’ ಸಹಿತ ಒಟ್ಟು 31 ಪ್ರಶಸ್ತಿಗಳನ್ನು ಘೋಷಿಸಿದೆ. ವಿವಿಧ ಕ್ಷೇತ್ರಗಳ 75 ಸಾಧಕರಿಗೆ ದಿನಾಂಕ 31-01-2024ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರಲ್ಲಿ 2019ರಿಂದ 2023ನೇ ಸಾಲಿನಲ್ಲಿ ಸಾಧಕರನ್ನು ಘೋಷಿಸಿದ್ದರೂ ವಿವಿಧ ಕಾರಣಗಳಿಂದಾಗಿ ಪ್ರದಾನ ಮಾಡಲಾಗದ ಪ್ರಶಸ್ತಿಗಳೂ ಸೇರಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ರೂ.10 ಲಕ್ಷ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಪುರಸ್ಕೃತರ ವಿವರ :
1. ‘ಬಸವರಾಷ್ಟ್ರೀಯ ಪುರಸ್ಕಾರ’-2023ನೇ ಸಾಲಿಗೆ ಮಹಾರಾಷ್ಟ್ರದ ಆನಂದ್ ತೆಲ್ತುಂಬಡೆ
2024ನೇ ಸಾಲಿಗೆ ಧಾರವಾಡದ ಡಾ. ಎನ್. ಜಿ. ಮಹದೇವಪ್ಪ
2. ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’- 2023ನೇ ಸಾಲಿಗೆ ಧಾರವಾಡದ ಜಿನದತ್ತ ದೇಸಾಯಿ
2024ನೇ ಸಾಲಿಗೆ ಗುಜರಾತಿನ ಗಾಂಧಿ ಸೇವಾಶ್ರಮ
3. ‘ಟಿ. ಚೌಡಯ್ಯ ಪ್ರಶಸ್ತಿ’- 2023ನೇ ಸಾಲಿಗೆ ಮುಂಬಯಿಯ ಕೊಳಲು ವಾದಕ ನಿತ್ಯಾನಂದ ಹಳದೀಪುರ
2024ನೇ ಸಾಲಿಗೆ ಕೋಲಾರದ ನಾದಸ್ವರ ಕಲಾವಿದ ಶ್ರೀರಾಮು
4. ‘ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿ’-2023ನೇ ಸಾಲಿಗೆ ಧಾರವಾಡ ಮೂಲದ ಹಿಂದೂಸ್ಥಾನಿ ಗಾಯಕ ಪಂ. ಸೋಮನಾಥ್ ಮರಡೂರು
2024ನೇ ಸಾಲಿಗೆ ಮೈಸೂರಿನ ಕರ್ನಾಟಕ ಸಂಗೀತ ಕಲಾವಿದ ಡಾ. ನಾಗಮಣಿ ಶ್ರೀನಾಥ್
ರೂ5 ಲಕ್ಷ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿ ಪುರಸ್ಕೃತರ ವಿವರ :
1. ‘ಪಂಪ ಪ್ರಶಸ್ತಿ’- 2023ನೇ ಸಾಲಿಗೆ ಡಾ. ಎಸ್. ಆರ್. ರಾಮಸ್ವಾಮಿ
2024ನೇ ಸಾಲಿಗೆ ಸಾಹಿತಿ ನಾ. ಡಿ’ಸೋಜ,
2. ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’- 2023ನೇ ಸಾಲಿಗೆ ಕೋಲಾರದ ಕೆ. ರಾಮಯ್ಯ
2024ನೇ ಸಾಲಿಗೆ ಬಳ್ಳಾರಿಯ ವೀರಸಂಗಯ್ಯ
3. ‘ಅಕ್ಕಮಹಾದೇವಿ ಪ್ರಶಸ್ತಿ’- 2023ನೇ ಸಾಲಿಗೆ ಕಲಬುರಗಿಯ ಮೀನಾಕ್ಷಿ ಬಾಳಿ
2024ನೇ ಸಾಲಿಗೆ ಬೆಂಗಳೂರಿನ ಡಾ. ವಸುಂಧರಾ ಭೂಪತಿ,
4. ‘ಕನಕಶ್ರೀ ಪ್ರಶಸ್ತಿ’- 2023ನೇ ಸಾಲಿಗೆ ಮಂಗಳೂರಿನ ಡಾ. ಶಿವರಾಮ ಶೆಟ್ಟಿ,
5. ‘ಕೆ.ಜಿ.ಕುಂದಣಗಾರ ಗಡಿನಾಡ ಪ್ರಶಸ್ತಿ’- 2023ನೇ ಸಾಲಿಗೆ ಮಹಾರಾಷ್ಟ್ರದ ಡಾ. ಕೆ. ವಿಶ್ವನಾಥ್ ಕಾರ್ನಾಡ್
2024ನೇ ಸಾಲಿಗೆ ಬೆಳಗಾವಿಯ ಚಂದ್ರಕಾಂತ ಪೋಕಳೆ,
6. ‘ಅತ್ತಿಮಬ್ಬೆ ಪ್ರಶಸ್ತಿ’- 2023ನೇ ಸಾಲಿಗೆ ಹಾಸನದ ಬಾನು ಮುಷ್ತಾಕ್
2024ನೇ ಸಾಲಿಗೆ ರಾಯಚೂರಿನ ಎಚ್.ಎಸ್.ಮುಕ್ತಾಯಕ್ಕ,
7. ‘ಬಿ.ವಿ.ಕಾರಂತ ಪ್ರಶಸ್ತಿ’- 2023ನೇ ಸಾಲಿಗೆ ಬೆಂಗಳೂರಿನ ಸಿ.ಬಸವಲಿಂಗಯ್ಯ
2024ನೇ ಸಾಲಿಗೆ ಮಂಗಳೂರಿನ ಸದಾನಂದ ಸುವರ್ಣ,
8. ‘ಗುಬ್ಬಿವೀರಣ್ಣ ಪ್ರಶಸ್ತಿ’- 2023ನೇ ಸಾಲಿಗೆ ತುಮಕೂರಿನ ಚನ್ನಬಸಯ್ಯ ಗುಬ್ಬಿ
2024ನೇ ಸಾಲಿಗೆ ವಿಜಯಪುರದ ಎಲ್.ಬಿ.ಶೇಖ್,
9. ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ’- 2023ನೇ ಸಾಲಿಗೆ ಮರಾಠಿ ಲೇಖಕ ಉತ್ತಮ ಕಾಂಬ್ಳೆ
2024ನೇ ಸಾಲಿಗೆ ದಾವಣಗೆರೆಯ ಬಿ.ಟಿ.ಜಾಹ್ನವಿ,
10. ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ- 2023ನೇ ಸಾಲಿಗೆ ಮೈಸೂರಿನ ಜಿ.ಎಲ್.ಎನ್.ಸಿಂಹ
2024ನೇ ಸಾಲಿಗೆ ಕಲಬುರಗಿಯ ಬಸವರಾಜ್ ಜಾನೆ,
11. ‘ಜಾನಪದಶ್ರೀ-ವಾದನ ಪ್ರಶಸ್ತಿ’- 2023ನೇ ಸಾಲಿಗೆ ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ
2024ನೇ ಸಾಲಿಗೆ ಚಿಕ್ಕಮಗಳೂರಿನ ಜಿ.ಪಿ. ಜಗದೀಶ್,
12. ‘ಜಾನಪದಶ್ರೀ-ಗಾಯನ ಪ್ರಶಸ್ತಿ’- 2023ನೇ ಸಾಲಿಗೆ ಬೀದರಿನ ಕಲ್ಲಪ್ಪ ಮಿರ್ಜಾಪುರ
2024ನೇ ಸಾಲಿಗೆ ಚಿತ್ರದುರ್ಗದ ಹಲಗೆ ದುರ್ಗಮ್ಮ,
13. ‘ನಿಜಗುಣಶ್ರೀ ಪುರಂದರ ಪ್ರಶಸ್ತಿ’- 2023ನೇ ಸಾಲಿಗೆ ಮೈಸೂರಿನ ಎಂ.ಕೆ.ಸರಸ್ವತಿ
2024ನೇ ಸಾಲಿಗೆ ಧಾರವಾಡದ ಅಕ್ಕಮಹಾದೇವಿ ಮಠ,
14. ‘ಕುಮಾರವ್ಯಾಸ ಪ್ರಶಸ್ತಿ’- 2023ನೇ ಸಾಲಿಗೆ ಗದಗದ ಸಿದ್ದೇಶ್ವರ ಶಾಸ್ತ್ರಿ
2024ನೇ ಸಾಲಿಗೆ ಮೈಸೂರಿನ ಕೃಷ್ಣಗಿರಿ ರಾಮಚಂದ್ರ,
15. ‘ಶಾಂತಲಾ ನಾಟ್ಯ ಪ್ರಶಸ್ತಿ’- 2023ನೇ ಸಾಲಿಗೆ ಬೆಂಗಳೂರಿನ ಚಿತ್ರಾ ವೇಣುಗೋಪಾಲ್
2024ನೇ ಸಾಲಿಗೆ ಬೆಂಗಳೂರಿನ ರೇವತಿ ನರಸಿಂಹನ್,
16. ‘ಸಂತ ಶಿಶುನಾಳ ಷರೀಫ ಪ್ರಶಸ್ತಿ’- 2023ನೇ ಸಾಲಿಗೆ ಬೆಂಗಳೂರಿನ ಕಸ್ತೂರಿ ಶಂಕರ್
2024ನೇ ಸಾಲಿಗೆ ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ ಆಯ್ಕೆಯಾಗಿದ್ದಾರೆ.