ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಗಳಿಂದ ವಿವಿಧ ರಾಮಾಯಣಗಳ ಆಯ್ದ ಭಾಗಗಳ ವಾಚನ ‘ರಾಮಕಥಾ ವೈವಿಧ್ಯ’ವು ದಿನಾಂಕ 03-02-2024ರಂದು ಅಪರಾಹ್ನ 3 ಗಂಟೆಗೆ ಕೊಡಿಯಾಲಬೈಲು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿದೆ.
ರಾಮಾಯಣ ಕೃತಿ ‘ತೊರವೆ ರಾಮಾಯಣ’ – ಶ್ರೀ ಸುರೇಶ್ ರಾವ್ ಅತ್ತೂರು, ‘ವಾಲ್ಮೀಕಿ ರಾಮಾಯಣ’ – ಶ್ರೀಮತಿ ಅಶ್ವಿನಿ, ‘ಅಧ್ಯಾತ್ಮ ರಾಮಾಯಣ’ – ಶ್ರೀಮತಿ ಉಷಾ ಅಮೃತ್ ಕುಮಾರ್, ‘ಅಧ್ಯಾತ್ಮ ರಾಮಾಯಣ’ – ಶ್ರೀಮತಿ ರವಿಕಲಾ ಸುಂದರ್, ‘ಮಂದಾರ ರಾಮಾಯಣ’, ಶ್ರೀಮತಿ ಗೀತಾ ಲಕ್ಷ್ಮೀಶ್, ‘ಶ್ರೀ ರಾಮಾಯಣ ದರ್ಶನಂ’ – ಶ್ರೀ ಚಂದ್ರಹಾಸ ಕಣಂತೂರು, ‘ತುಳಸಿ ರಾಮಾಯಣ’ – ಶ್ರೀಮತಿ ಕವಿತಾ, ‘ಜೈಮಿನಿ ಭಾರತ’ – ಶ್ರೀಮತಿ ಯಶೋದಾ ಕುಮಾರಿ, ‘ಪಂಪ ರಾಮಾಯಣ’ – ಶ್ರೀಮತಿ ಚಂದ್ರಪ್ರಭಾ, ‘ಮಂದಾರ ರಾಮಾಯಣ’ – ಶ್ರೀಮತಿ ಸಂಧ್ಯಾ ಆಳ್ವ ಇವರುಗಳು ವಾಚನ ಮತ್ತು ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಮಾಯಣ ಕಥಾ ಶ್ರವಣಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.