ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಮಂಗಳೂರು ಗಮಕ ಕಲಾ ಪರಿಷತ್ತು ಆಯೋಜಿಸಿದ ಮನೆಮನೆ ಗಮಕ 13ನೇ ಪಲ್ಲವ ಕಾರ್ಯಕ್ರಮವು ದಿನಾಂಕ 29-11-2023ರ ಬುಧವಾರದಂದು ಸಾಯಂಕಾಲ ನಡೆಯಿತು.
ತಲಪಾಡಿ ದೇವಿ ನಗರದ ಶಾರದಾ ವಿದ್ಯಾನಿಕೇತನ ಇಲ್ಲಿನ ಶಿಕ್ಷಕರ ವಸತಿನಿಲಯದಲ್ಲಿರುವ ಉಪನ್ಯಾಸಕಿ ಶ್ರೀಮತಿ ಸುಮನ ಭಟ್ ಮತ್ತು ಶ್ರೀಯುತ ಜಿ. ಆರ್. ಪ್ರಸನ್ನ ಇವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನಕ ದಾಸರ ನಳಚರಿತ್ರೆಯ ಭಾಗವಾದ ‘ದಮಯಂತಿ ಸ್ವಯಂವರ’ದ ವಾಚನ ನಡೆಯಿತು. ವಾಚನಕಾರರಾಗಿ ಶ್ರೀ ಸುರೇಶ್ ರಾವ್ ಅತ್ತೂರು ಹಾಗೂ ವ್ಯಾಖ್ಯಾನಕಾರರಾಗಿ ಶ್ರೀ ಶುಭಕರ ಕೆ. ತಲಪಾಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

