ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಸಮಿತಿ ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಭರವಸೆಯ ಲೇಖಕಿ ಶ್ರಿಮತಿ ದೀಪ್ತಿ ಎಸ್.ರಾವ್ (ಸಿಯಾಟಲ್ ಅಮೆರಿಕಾ) ಇವರು ರಚಸಿರುವ “ಸಾವಿನಂಚಿನ ಸಂವಾದ – ಸಾರ್ಥಕ ಬದುಕಿನ ಸೋಪಾನ ” ಎಂಬ ಅಪರೂಪದ ಕೃತಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡಿದೆ. ಇವರು ಖ್ಯಾತ ಸಾಹಿತಿ ಡಾ. ಚ.ನ. ಶಂಕರ ರಾವ್ ಹಾಗೂ ಡಾ. ಸರಸ್ವತಿ ಎಸ್. ರಾವ್ ಇವರ ಸುಪುತ್ರಿ.
ಶ್ರೀಮತಿ ವೀಣಾ ಟಿ.ಶೆಟ್ಟಿ ಮಹಾಪ್ರಬಂಧಕರು, (ಶಿಕ್ಷಣ ವಿಭಾಗ) ಎಂ. ಆರ್. ಪಿ. ಎಲ್. ಮಂಗಳೂರು ಇವರು ಪುಸ್ತಕ ಬಿಡುಗಡೆ ಮಾಡಿ, “ಪುಸ್ತಕದಲ್ಲಿನ ಉತ್ತಮ ವಿಚಾರಗಳನ್ನು ನಾವು ಯಾವತ್ತೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಎಲ್ಲರಿಗೂ ಮಾರ್ಗದರ್ಶಕವಾಗಲಿ.” ಎಂದರು. ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ.ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು , ಕೃತಿಯಿಂದ ಆಯ್ದ ಕೆಲವು ವಿಚಾರಗಳ ಬಗ್ಗೆ ತಮ್ಮ ಕ್ರಿಯಾಶೀಲ ಅನಿಸಿಕೆಗಳನ್ನು ಹಂಚಿಕೊಂಡು ಶುಭ ಹಾರೈಸಿದರು. ಅ. ಭಾ. ಸಾ. ಪ. ಮಂಗಳೂರು ತಾಲೂಕು ಸಮಿತಿಯ ಕಾರ್ಯದರ್ಶಿ ಶ್ರೀ ಹರೀಶ್ ಎ. ಮತ್ತು ಬೇಸಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಯಪ್ಪ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಚ.ನ. ಶಂಕರ ರಾವ್ ಸ್ವಾಗತಿಸಿ, ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಶ್ರಿಮತಿ ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಶ್ರೀಮತಿ ದೀಪ್ತಿ ಎಸ್. ರಾವ್ ರವರ ಸಾವಿನಂಚಿನ ಸಂವಾದ -ಸಾರ್ಥಕ ಬದುಕಿನ ಸೋಪಾನ ಕೃತಿ ಬಿಡುಗಡೆ
Previous Articleಪುಣ್ಯಲಹರಿ‘ ಸಮೂಹ ಗೀತ ರೂಪಕ