ಮಂಗಳೂರು : ಸ್ವರಾನಂದ ಪ್ರತಿಷ್ಠಾನದ ‘ಹಿಂದೂಸ್ಥಾನಿ ಸಂಗೀತ ಬೈಠಕ್’ ಮಂಗಳೂರಿನ ಕಾರ್ ಸ್ಟ್ರೀಟ್ ಇಲ್ಲಿರುವ ಬಿ.ಇ.ಎಂ. ಹೈಸ್ಕೂಲಿನಲ್ಲಿ ದಿನಾಂಕ 27-01-2024ರಂದು ನಡೆಯಿತು. ಮಂಗಳೂರಿನ ಯುವಗಾಯಕ ಕೀರ್ತನ್ ನಾಯ್ಗ ಬಿಹಾಗ್ ಹಂಸಧ್ವನಿ ರಾಗಗಳ ಮೂಲಕ ಸಂಗೀತ ರಸಿಕರ ಪ್ರಶಂಸೆಗೆ ಪಾತ್ರರಾದರು. ಮಂಗಳೂರಿನ ಅಮಿತ್ ಕುಮಾರ್ ಬೇಂಗ್ರೆ ಅವರ ಶಿಷ್ಯರು. ಅವರಿಗೆ ಹಾರ್ಮೋನಿಯಂನಲ್ಲಿ ಪುತ್ತೂರಿನ ಕಿಶನ್ ಪ್ರಭು ಹಾಗೂ ತಬಲಾದಲ್ಲಿ ಬಾಯಾರಿನ ಆಶಯ್ ಕಲಾವಂತ್ಕರ್ ಸಾಥ್ ನೀಡಿದರು. ತಂಬೂರದಲ್ಲಿ ಸುಶಾನ್ ಸಾಲಿಯಾನ್ ಸಹಕರಿಸಿದರು.
ಬಳಿಕ ಪುಣೆಯ ಪಂಡಿತ್ ವಿಜಯ ಕೋಪಾರ್ಕರ್ ಶಿಷ್ಯರಾದ ಮಂದಾರ್ ಗಾದ್ಗಿಲ್ ಅವರ ಗಾಯನ ಕಾರ್ಯಕ್ರಮ ನಡೆಯಿತು. ರಾಗ್ ಶ್ರೀ, ದುರ್ಗಾ, ಮಾಲ್ ಕಂಸ್, ಚಂದ್ರ ಕಂಸ್ ಹಾಗೂ ಭೈರವಿಗಳ ಬಂಧಿಶ್‌ಗಳನ್ನು ಸುಶ್ರಾವ್ಯವಾಗಿ ಹಾಡಿದರು. ದೀಪಕ್ ನಾಯಕ್ ಹರಿಕಂಡಿಗೆ ಹಾಗೂ ಶಶಿಕಿರಣ್ ಮಣಿಪಾಲ್ ತಬಲಾ ಹಾಗೂ ಹಾರ್ಮೋನಿಯಂನಲ್ಲಿ ಸಹಕರಿಸಿದರು. ತಂಬೂರದಲ್ಲಿ ನರಸಿಂಹ್ ಪೈ ಸಾಥ್ ನೀಡಿದರು.