ಮಂಗಳೂರು : ಕದ್ರಿಯಲ್ಲಿರುವ ನೃತ್ಯ ಭಾರತಿ (ರಿ.) ಇದರ ವತಿಯಿಂದ ‘ನೃತ್ಯ ಯಜ್ಞ’ ಕಾರ್ಯಕ್ರಮವು ದಿನಾಂಕ 12-02-2024ರಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ. ಕದ್ರಿ ಮಲ್ಲಿಕಾ ಕಲಾ ವೃಂದ ಇದರ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಪೇಜಾವರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಉರ್ವ ನಾಟ್ಯಾಲಯದ ನಿರ್ದೇಶಕಿಯಾದ ಕಲಾಶ್ರೀ ವಿದುಷಿ ಶ್ರೀಮತಿ ಕಮಲಾ ಭಟ್, ಬಿಜೈಯ ಸನಾತನ ನಾಟ್ಯಾಲಯದ ನಿರ್ದೇಶಕಿಯಾದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್, ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಕಲಾ ಒಕ್ಕೂಟದ ಅಧ್ಯಕ್ಷರಾದ ವಿದ್ವಾನ್ ಸಾಯಿ ನಾರಾಯಣ, ಮಂಗಳೂರಿನ ಶ್ರೀಮತಿ ರೂಪಲಕ್ಷ್ಮೀ ಎಚ್. ರಾವ್, ಶ್ರೀ ಮಂಜುನಾಥ ನೃತ್ಯ ಕಲಾಶಾಲೆಯ ನಿರ್ದೇಶಕರಾದ ವಿದ್ವಾನ್ ಮಂಜುನಾಥ್ ಪುತ್ತೂರು ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ನೃತ್ಯ ಭಾರತಿ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.