ಹಳೆಯಂಗಡಿ : ಮೂಲ್ಕಿ ಕಸಾಪ ಘಟಕ ಆಯೋಜಿಸಿದ ಸಾಹಿತಿ ವಸಂತ ಮಾಧವರ ‘ಇತಿಹಾಸ ಯಾನ ಸಾಂಸ್ಜೃತಿಕ ನೋಟಗಳು’ ಕೃತಿ ಹಾಗೂ ಡಾ. ಪದ್ಮನಾಭ ಭಟ್ ಬರೆದ ‘ಡಾ. ಕೆ. ಜಿ. ವಸಂತಮಾಧವರ ಪರಿಚಯ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 03-02-2024ರಂದು ಪಾವಂಜೆಯ ಡಾ. ವಸಂತ ಮಾಧವರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ “ನಮ್ಮ ನಾಡಿನ ಹೆಮ್ಮೆಯ ಇತಿಹಾಸ ಬರಹಗಾರರಲ್ಲಿ ಡಾ. ವಸಂತ ಮಾಧವರು ಒಬ್ಬರು. ಅವರ ಬರಹಗಳು ಅನೇಕ ಸಂಗತಿಗಳತ್ತ ಬೆಳಕು ಚೆಲ್ಲಿವೆ. ಅವರ ಕೃತಿಗಳು ಅಧ್ಯಯನಕಾರರಿಗೆ ಮಾರ್ಗದರ್ಶಕವಾಗಿವೆ. ಅವರ ಆಸಕ್ತಿ ಮತ್ತು ಬರವಣಿಗೆಗೆ ವಯಸ್ಸು ಲೆಕ್ಕವೇ ಅಲ್ಲ.” ಎಂದು ಹೇಳಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಕೃತಿಗಳನ್ನು ದುಡ್ಡು ಕೊಟ್ಟು ಕೊಂಡು ಓದಿ. ಇತರರಿಗೂ ಓದಲು ಪ್ರೇರೇಪಿಸಿ, ಬರಹಗಾರರನ್ನು ಪ್ರೋತ್ಸಾಹಿಸಬೇಕು. ವಸಂತಮಾಧವರ ಸಂಶೋಧನೆಯ ಸಾಧನೆ ಅಭಿನಂದನೀಯ.” ಎಂದರು. ಪುಸ್ತಕ ಲೋಕಾರ್ಪಣೆಯ ಬಳಿಕ ಕೃತಿಕಾರರನ್ನು ಸಂಮಾನಿಸಲಾಯಿತು.
ವಿದ್ವಾಂಸ ಡಾ. ಗಣೇಶ ಅಮೀನ್ ಸಂಕಮಾರ್, ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು. ಹೆರಿಕ್ ಪಾಯಸ್, ಮೋಹನ್ ರಾವ್ ಕಿಲ್ಪಾಡಿ, ಉದಯಕುಮಾರ ಹಬ್ಬು, ವಸಂತ ಮಾಧವರ ಪತ್ನಿ ವಿನೋದಾ ಹಾಗೂ ಮಗಳು ನಮಿತಾ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.