ಮಂಗಳೂರು : ಮಾಂಡ್ ಸೊಭಾಣ್ ಪ್ರವರ್ತಿತ ತಿಂಗಳ ವೇದಿಕೆ ಸರಣಿಯ 266ನೇ ಕಾರ್ಯಕ್ರಮ ದಿನಾಂಕ 04-02024ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಅನಿವಾಸಿ ರಂಗಕರ್ಮಿ ಆಲ್ವಿನ್ ಪಿಂಟೊ, ದುಬಾಯ್ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರಿಕಾರ ಎರಿಕ್ ಒಝೇರಿಯೊ, ಖಜಾಂಚಿ ಎಲ್ರೊನ್ ರೊಡ್ರಿಗಸ್ ವೇದಿಕೆಯಲ್ಲಿದ್ದರು.
ನಂತರ ನಾಟಕ ಕಲಾಕುಲ್ ರೆಪರ್ಟರಿ ಹಾಗೂ ಮಾಂಡ್ ತಂಡದ ಕಲಾವಿದರುಗಳು ದಿ. ಜಾರ್ಜ್ ಪಿಂಟೊ ಐಕಳ ಇವರು ರಚಿಸಿದ 3 ಕಿರುನಾಟಕಗಳಾದ ಸಯ್ರಿಕ್, ಬಾಂದ್ ಹಾಗೂ ಭಿಜುಡ್ ಇವುಗಳನ್ನು ಪ್ರದರ್ಶಿಸಿದರು. ಈ ನಾಟಕಗಳನ್ನು ವಿಕಾಸ್ ಕಲಾಕುಲ್ ನಿರ್ದೇಶಿಸಿದ್ದರು. ನಾಟಕಗಳ ನಡುವೆ ಆಲ್ರಿಶಾ ರೊಡ್ರಿಗಸ್ ಕೈಕಂಬ ಮತ್ತು ಸೃಜನಾ ಮತಾಯಸ್ ಜಾರ್ಜ್ ಇವರ ಕವಿತೆಗಳನ್ನು ವಾಚಿಸಿದರು.
ಕಲಾಕುಲ್ ರೆಪರ್ಟರಿಯ ವೆನಿಶ, ವಿನ್ಸನ್, ಡಾರ್ವಿನ್, ವರ್ಷಿತಾ, ಜೊಯ್ಸನ್ ಹಾಗೂ ಮಾಂಡ್ ನಾಟಕ ತಂಡದ ಸದಸ್ಯರಾದ ಸಂದೀಪ್, ಸವಿತಾ, ರಾಹುಲ್, ಕೇರನ್ ಮತ್ತು ವೆರಿನಾ ನಟಿಸಿದರು. ಜ್ಯಾಕ್ಸನ್ ಡಿಕುನ್ಹಾ ವೇದಿಕೆ ವಿನ್ಯಾಸ ಮಾಡಿದರೆ, ಜೀವನ್ ಸಿದ್ದಿ ಸಂಗೀತ ಹಾಗೂ ಆಮ್ರಿನ್ ಡಿಸೋಜ ಬೆಳಕಿನ ವಿನ್ಯಾಸ ನಿರ್ವಹಿಸಿದರು. ಬೆಳಕು ಏಂಜಲ್ಸ್ ಪಡೀಲ್ ಹಾಗೂ ಧ್ವನಿ ವ್ಯವಸ್ಥೆಯನ್ನು ಸುರಭಿ ಸೌಂಡ್ಸ್ ಇವರು ನಿರ್ವಹಿಸಿದ್ದರು.
Subscribe to Updates
Get the latest creative news from FooBar about art, design and business.
Previous Articleಸುಳ್ಯದ ಅವನಿ ಎಂ. ಎಸ್. ಗೆ ‘ಕಲಾ ಚೈತನ್ಯ’ ಪ್ರಶಸ್ತಿ
Next Article ಸುರತ್ಕಲ್ಲಿನಲ್ಲಿ ಯಶಸ್ವಿಗೊಂಡ ‘ದೇಸಿ ಜಗಲಿ ಕಥಾಕಮ್ಮಟ’