ತೆಕ್ಕಟ್ಟೆ: ಕೊಮೆಯ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಾಂಸ್ಕೃತಿಕ ಸಂಘಟನೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ‘ಸಿನ್ಸ್-1999 ಶ್ವೇತಯಾನ ಕಾರ್ಯಕ್ರಮವು ದಿನಾಂಕ 18-02-2024 ರಂದು ಸಮುದ್ಯತಾ ಸಂಸ್ಥೆಯ ಸಹಯೋಗದೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರಿನಲ್ಲಿ ಉದ್ಘಾಟನೆಗೊಳ್ಳಲಿದೆ.
ಸಂಜೆ ಗಂಟೆ 5.00ಕ್ಕೆ ತೆಕ್ಕಟ್ಟೆ ಹಯಗ್ರೀವದಿಂದ ಮೆರವಣಿಗೆಯೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ತನಕ ಚಲಿಸಿ, ಸಂಜೆ ಗಂಟೆ 6.30ರಿಂದ ಕೇಂದ್ರದ ಕಲಿಕಾ ಮಕ್ಕಳಿಂದ ಕಾರ್ಯಕ್ರಮ ವೈವಿದ್ಯ ಪ್ರದರ್ಶನಗೊಳ್ಳಲಿದೆ. ಬಳಿಕ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಯಕ್ರಮವನ್ನು ಉದ್ಘಾಟಿಸಲಿದ್ದು, ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನದ ವಿದ್ವಾಂಸ ಪವನ್ ಕಿರಣ್‌ಕೆರೆ ಶುಭಾಸಂಶನೆ ಮಾಡಲಿದ್ದಾರೆ.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀಮತಿ ಪೂರ್ಣಿಮಾ, ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ, ಸಮುದ್ಯತಾದ ಯೋಗೀಂದ್ರ ಹಾಗೂ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿರುವರು.
ಸಭಾಕಾರ್ಯಕ್ರಮದ ಬಳಿಕ ಕಲಾ ಪೋಷಕರ ಕಲಾವಂತಿಕೆಯಲ್ಲಿ “ಪುರಾಣ ಕಥಾ ಕಲ್ಯಾಣಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಭ್ರಮಾಚರಣೆ ವರ್ಷ ಪೂರ್ತಿ ನಡೆಯಲಿದ್ದು, ವಾರಾಂತ್ಯದ ಪ್ರತೀ ಶನಿವಾರ ಮತ್ತು ಭಾನುವಾರ ಜಿಲ್ಲೆ ಹಾಗೂ ಹೊರರಾಜ್ಯಗಳ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 2025ರ ಮಾರ್ಚ್ 2ರಂದು ಸಮಾರೋಪ ಸಮಾರಂಭ ನಡೆಯಲಿದೆ.