ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಚೊಚ್ಚಲ ಕಾರ್ಯಕ್ರಮ ‘ರಾಮ ಕಥಾ ವೈಭವ’ವು ದಿನಾಂಕ 03-02-2024ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಅ.ಭಾ.ಸಾ.ಪ.ದ ಮಂಗಳೂರು ತಾಲೂಕು ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಶ್ರೀರಾಮನ ಚಿತ್ರಪಟಕ್ಕೆ ದೀಪ ಬೆಳಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಖ್ಯಾತ ಗಮಕಿಗಳಾದ ಶ್ರೀಯುತ ಸುರೇಶ್ ಅತ್ತೂರ್ ಇವರು ರಾಮ ಕಥಾ ವೈಭವ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಕ್ಕೆ ತೊರವೆ ರಾಮಾಯಣದ ಆಯ್ದ ಭಾಗದ ವಾಚನದೊಂದಿಗೆ ವಿದ್ಯುಕ್ತ ಚಾಲನೆಯನ್ನು ನೀಡಿದರು.
ಅನಂತರ ಶ್ರೀ ಚಂದ್ರಹಾಸ ಕಣಂತೂರು, ಶ್ರೀಮತಿ ಉಷಾ ಅಮೃತಕುಮಾರ್, ರವಿಕಲಾ ಸುಂದರ್, ಅಶ್ವಿನಿ, ಗೀತಾ ಲಕ್ಷ್ಮೀಶ್, ಡಾ. ಕವಿತಾ, ಯಶೋದ ಕುಮಾರಿ, ಚಂದ್ರಪ್ರಭ ದಿವಾಕರ್ ಮತ್ತು ಸಂಧ್ಯಾ ಆಳ್ವ ವಿವಿಧ ರಾಮಾಯಣಗಳನ್ನು ವಾಚಿಸಿದರು.
ಸಭಿಕರಾಗಿ ಪಾಲ್ಗೊಂಡಿದ್ದ ಶ್ರೀ ತುಪ್ಪೇಕಲ್ಲು ನರಸಿಂಹ ಶೆಟ್ಟಿ, ಶ್ರೀ ಶಿವಪ್ರಸಾದ್ ಶೆಟ್ಟಿ, ಶ್ರೀಮತಿ ಜ್ಯೋತಿ ಮಹಾದೇವ್‌ರವರು ತಮ್ಮ ಅನಿಸಿಕೆಗಳೊಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅ.ಭಾ.ಸಾ.ಪ. ಇದರ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಶ್ರೀ ಶೈಲೇಶ್ ಕುಲಾಲ್, ಶ್ರೀ ಹರೀಶ್ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಆಳ್ವ ಕಾರ್ಯಕ್ರಮ ನಿರೂಪಿಸಿ, ಶ್ರೀ ಚಂದ್ರಹಾಸ್ ಕಣಂತೂರ್ ಧನ್ಯವಾದವನ್ನು ನೆರವೇರಿಸಿ, ಶ್ರೀ ಸುರೇಶ್ ರಾವ್ ಅತ್ತೂರು ಶಾಂತಿ ಮಂತ್ರವನ್ನು ಪಠಿಸಿದರು.