ಪಾಂಬೂರು : ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪರಿಚಯ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಪರಿಚಯ ರಂಗೋತ್ಸವ 2024’ವು ದಿನಾಂಕ 18-02-2024ರಿಂದ 24-02-2024ರವರೆಗೆ ಪಾಂಬೂರಿನ ರಂಗಪರಿಚಯದಲ್ಲಿ ನಡೆಯಲಿದೆ.
ದಿನಾಂಕ 18-02-2024ರಂದು ಸಂಜೆ 6.30 ಗಂಟೆಗೆ ಮಂಡ್ಯ ಪಾಂಡವಪುರದ ‘ದಿ ಚಾನಲ್ ಥಿಯೇಟರ್ಸ್’ ಪ್ರಸ್ತುತ ಪಡಿಸುವ ‘ಲೀಕ್ ಔಟ್’ ಕನ್ನಡ ನಾಟಕ, ದಿನಾಂಕ 19-02-2024ರಂದು ಕೇರಳದ ಅರುಣ್ ಲಾಲ್ ರಂಗ ಪಠ್ಯ, ವಿನ್ಯಾಸ ಮತ್ತು ನಿದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ಅಭಿನಯಿಸುವ ‘ಜುಗಾರಿ’ ಕೊಂಕಣಿ ನಾಟಕ, ದಿನಾಂಕ 20-02-2024ರಂದು ಸಂತೋಷ್ ನಾಯಕ್ ಪಟ್ಲ ವಿನ್ಯಾಸ ಮತ್ತು ನಿದೇಶನದಲ್ಲಿ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ ತುಳು ನಾಟಕ ‘ಒಂಜಿ ದಮ್ಮಪದ’, ದಿನಾಂಕ 21-02-2024ರಂದು ಹಿಂದಿಯಿಂದ ಕನ್ನಡ ರೂಪಾಂತರ ಮತ್ತು ನಿರ್ದೇಶನ ಸದಾನಂದ ಸುವರ್ಣ, ಮಂಗಳೂರಿನ ಸುವರ್ಣ ಪ್ರತಿಷ್ಠಾನ ಪ್ರಸ್ತುತಿ ಪಡಿಸುವ ‘ಉರುಳು’ ಕನ್ನಡ ನಾಟಕ, ದಿನಾಂಕ 22-02-2024ರಂದು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಣಿಪಾಲದ ‘ಸಂಗಮ ಕಲಾವಿದೆರ್’ ಪ್ರಸ್ತುತ ಪಡಿಸುವ ‘ಮರಣ ಗೆಂದಿನಾಯೆ’ ತುಳು ನಾಟಕ, ದಿನಾಂಕ 23-02-2024ರಂದು ಮಂಗಳೂರಿನ ಅಸ್ತಿತ್ವ (ರಿ.) ಮತ್ತು ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ‘ದಾದ್ಲ್ಯಾಂ ಮಧೆಂ ತುಂ ಸದೆಂವ್’ ಕೊಂಕಣಿ ನಾಟಕ, ದಿನಾಂಕ 24-02-2024ರಂದು ಗಣೇಶ್ ಮಂದಾರ್ತಿ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೈಂದೂರು ಸುರಭಿ ಪ್ರಸ್ತುತ ಪಡಿಸುವ ‘ಮಕ್ಕಳ ರಾಮಾಯಣ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.